ADVERTISEMENT

ನೀಟ್‌: ರಾಜ್ಯದ 72,262 ವಿದ್ಯಾರ್ಥಿಗಳು ಅರ್ಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 20:23 IST
Last Updated 8 ಸೆಪ್ಟೆಂಬರ್ 2022, 20:23 IST
   

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ ರಾಜ್ಯದ 72,262 ವಿದ್ಯಾರ್ಥಿ ಗಳು ಅರ್ಹತೆ ಪಡೆದಿದ್ದಾರೆ.

ರಾಜ್ಯದಿಂದ 1,22,423 ವಿದ್ಯಾರ್ಥಿಗಳು ಹಾಜರಾಗಿ ದ್ದರು. ಅಖಿಲಭಾರತ ಮಟ್ಟದ ಮೊದಲ
ಐದು ಸ್ಥಾನಗಳಲ್ಲಿ ರಾಜ್ಯದ ಇಬ್ಬರು, ಅಗ್ರ 10 ಸ್ಥಾನಗಳಲ್ಲಿ ಮೂವರು ವಿದ್ಯಾರ್ಥಿಗಳು ಇದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ್‍ಯಾಂಕ್ ಪಡೆದ ಬೆಂಗಳೂರಿನ ನ್ಯಾಷನಲ್ ಸೆಂಟರ್
ಫಾರ್ ಎಕ್ಸ್‌ಲೆನ್ಸ್‌ನ ಹೃಷಿಕೇಶ್ ನಾಗ ಭೂಷಣ ಗಂಗುಲೆ ರಾಜ್ಯಕ್ಕೆ ಮೊದಲಿಗ.

ರಾಜ್ಯ ಸಿಇಟಿಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಪಶು ವೈದ್ಯಕೀಯದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಆಶಯ ವ್ಯಕ್ತಪಡಿಸಿದ ಹೃಷಿಕೇಶ್ ದೆಹಲಿಯ ಏಮ್ಸ್‌ಗೆ ಸೇರಲು ನಿರ್ಧರಿಸಿದ್ದಾರೆ.

ADVERTISEMENT

ಬೆಳಗಾವಿ ಜಿಲ್ಲೆಯ ಉಚಗಾವಿಯ ರುಚಾ ಪವಾಶೆರಾಷ್ಟ್ರಮಟ್ಟದಲ್ಲಿ 4ನೇ ರ್‍ಯಾಂಕ್‌ ಪಡೆದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಅವರು ಸೇಂಟ್‌ ಝೇವಿಯರ್ಸ್‌ ಪ್ರೌಢಶಾಲೆ ಹಾಗೂ ರಾಜಾ ಲಖಮಗೌಡ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ. ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮ ಫಲಿತಾಂಶ ಬಂದಿದೆ. ಸಂತಸದೊಂದಿಗೆ ಅಚ್ಚರಿಯೂ ಆಗಿದೆ. ಅಪ್ಪ, ಅಮ್ಮನ ಆಸೆಯಂತೆ ವೈದ್ಯೆಯಾಗುವ ಖುಷಿ ಇದೆಎಂದು ರುಚಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬೆಂಗಳೂರಿನ ಶ್ರೀಚೈತನ್ಯ ಟೆಕ್ನೋ ಸ್ಕೂಲ್‌ನ ಆರ್‌. ಕೃಷ್ಣ ರಾಜ್ಯದ 3ನೇ ಟಾಪರ್. ಅವರು ಅಖಿಲ ಭಾರತ ಮಟ್ಟದಲ್ಲಿ 8ನೇ ರ್‍ಯಾಂಕ್‌ ಗಳಿಸಿದ್ದಾರೆ. ಸಿಇಟಿಯ ನ್ಯಾಚುರೋಪತಿ ಮತ್ತು ಯೋಗದಲ್ಲಿ 3ನೇ ರ್‍ಯಾಂಕ್‌ ಪಡೆದಿದ್ದರು. ಉಡುಪಿಯ ಮಣಿಪಾಲದ ಮಾಧವ ಕೃಪಾ ಇಂಗ್ಲಿಷ್ ಶಾಲೆಯ ವ್ರಜೇಶ್ ವೀಣಾಧರ್ ಶೆಟ್ಟಿ ಅವರು ಅಖಿಲ ಭಾರತ ಮಟ್ಟದಲ್ಲಿ 13ನೇ ರ‍್ಯಾಂಕ್ ಗಳಿಸಿದ್ದಾರೆ. ಅವರು ಸಿಇಟಿ ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಶುಭಾ ಕೌಶಿಕ್ ಅವರು ಅಖಿಲ ಭಾರತ ಮಟ್ಟದ 17ನೇ ರ‍್ಯಾಂಕ್ ಪಡೆದಿದ್ದಾರೆ. ಅವರು ಬೆಂಗಳೂರಿನ ಶ್ರೀಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿನಿ. ಸಿಇಟಿ ಪಶುವೈದ್ಯಕೀಯ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದರು.

ರಾಜ್ಯದ ಸಾಧಕರು

ಹೆಸರು– ಅಖಿಲ ಭಾರತ – ರಾಜ್ಯ

ಹೃಷಿಕೇಶ ನಾಗಭೂಷಣ ಗಂಗುಲೆ 03–01

ರುಚಾ ಪವಾಶೆ 04–02

ಆರ್.ಕೃಷ್ಣ 08–03

ವ್ರಜೇಶ್ ವೀಣಾಧರ ಶೆಟ್ಟಿ 13–04

ಶುಭಾ ಕೌಶಿಕ್ 17–05

ಅಂಕುಶ ಗೌಡ 18–06

ಮುರಿಕಿ ಶ್ರೀ ಬರುಣಿ 23–07

ಆದಿತ್ಯ ಕಾಮತ್ ಅಮ್ಮೆಂಬಳ28–08

ರೋಹಿತ್ ಆರ್ಜೆ 42–09

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.