ADVERTISEMENT

ಶಿಕ್ಷಕಿ ಲೀಲಾವತಿಗೆ ಅನುಪಮ ಪ್ರಶಸ್ತಿ ಪ್ರಧಾನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 13:04 IST
Last Updated 10 ಮಾರ್ಚ್ 2020, 13:04 IST
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಕಿ ಲೀಲಾವತಿ ಅವರು ಉತ್ತಮ ಶಿಕ್ಷಕಿ ’ಅನುಪಮ ಪ್ರಶಸ್ತಿ’ ಯನ್ನು ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ಸ್ವೀಕರಿಸಿದರು.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಕಿ ಲೀಲಾವತಿ ಅವರು ಉತ್ತಮ ಶಿಕ್ಷಕಿ ’ಅನುಪಮ ಪ್ರಶಸ್ತಿ’ ಯನ್ನು ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ಸ್ವೀಕರಿಸಿದರು.   

ಸುಂಟಿಕೊಪ್ಪ: ಸಮೀಪದ 7ನೇಹೊಸಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಕೆ.ಲೀಲಾವತಿ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರತಿ ಜಿಲ್ಲೆಯಿಂದ ಒಬ್ಬರಿಗೆ ನೀಡಲಾಗುವ ಉತ್ತಮ ಶಿಕ್ಷಕಿ ’ಅನುಪಮ ಪ್ರಶಸ್ತಿ’ ಪ್ರಧಾನವು ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್‌ನಲ್ಲಿ ಮಾ.8 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾಜೊಲ್ಲೆ ವಿತರಿಸಿದರು.

ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಬಾರಿಕೆ ಕುಶಾಲಪ್ಪ ಮತ್ತು ರುಕ್ಮಿಣಿ ದಂಪತಿಯ ಪುತ್ರಿ.

1990ರಂದು ಅರಕಲಗೋಡು ತಾಲೂಕಿನ ಅರೆಗಲ್ಲುವಿನಲ್ಲಿ ವೃತ್ತಿ ಜೀವನ ಆರಂಭಿಸಿ, ನಂತರ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ, ಮತ್ತಿಕಾಡು ಶಾಲೆಯಲ್ಲಿ ಸೇವೆ ಸಲ್ಲಿಸಿ 2016 ರಿಂದ ಬಡ್ತಿ ಪಡೆದು ಮುಖ್ಯ ಶಿಕ್ಷಕಿಯಾಗಿ 7ನೇ ಹೊಸಕೋಟೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ADVERTISEMENT

ಇವರು ಸುಂಟಿಕೊಪ್ಪದ ನಿವೃತ್ತ ಮುಖ್ಯ ಶಿಕ್ಷಕ ಎಂ.ಕೆ.ತಿಮ್ಮಪ್ಪ ಅವರ ಪತ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.