ADVERTISEMENT

ನ.3ರಂದು ಎನ್‌ಎಂಎಂಎಸ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:53 IST
Last Updated 15 ಸೆಪ್ಟೆಂಬರ್ 2019, 19:53 IST

ಬೆಂಗಳೂರು: ಆರ್ಥಿಕದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ಬೆಂಬಲ ನೀಡುವ ಕೇಂದ್ರ ಸರ್ಕಾರ ಪ್ರಾಯೋಜಿತ ನ್ಯಾಷನಲ್‌ ಮೀನ್‌ ಕಮ್‌ ಮೆರಿಟ್‌ ಸ್ಕಾಲರ್‌ಶಿಪ್‌ (ಎನ್‌ಎಂಎಂಎಸ್‌) ಪರೀಕ್ಷೆ ನವೆಂಬರ್‌ 3ರಂದು ನಡೆಯಲಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳ ಅರ್ಜಿಯನ್ನು ಆನ್‌ಲೈನ್‌ ಮೂಲಕ ಇದೇ 25ರೊಳಗೆ ಸಲ್ಲಿಸಬೇಕು. ಮಾಹಿತಿಗೆ http://kseeb.kar.nic.in ವೆಬ್‌ಸೈಟ್‌ ನೋಡಬಹುದು ಎಂದು ಕರ್ನಾಟಕ ಶಾಲಾ ಮೌಲ್ಯಾಂಕನ ಗುಣಮಟ್ಟ ಮತ್ತು ಅಂಗೀಕರಣ ಪರಿಷತ್‌ನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT