ADVERTISEMENT

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಪರಿಸ್ಥಿತಿ ಈಗ ಇಲ್ಲ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 4:27 IST
Last Updated 27 ನವೆಂಬರ್ 2023, 4:27 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಪರಿಸ್ಥಿತಿಯಂತೂ ಈಗ ಇಲ್ಲ. ಹೀಗಾಗಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಗೆ ಸಮಸ್ಯೆ ಆಗುವುದಿಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯುತ್ ಖರೀದಿ ದುಪ್ಪಟ್ಟು ಮಾಡಲಾಗಿದೆ. ಬಹಳ ಕಷ್ಟ ಅನ್ನುವ ಪರಿಸ್ಥಿತಿ ಈಗ ಇಲ್ಲ. ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂಬ ನೆಪದಲ್ಲಿ ಜನರಿಗೆ ಬೇರೆ ಸವಲತ್ತುಗಳನ್ನು ಕೊಡುವುದನ್ನು ನಿಲ್ಲಿಸುವುದಿಲ್ಲ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ' ಎಂದರು.

ಹುಚ್ಚು ಕೆಲಸ ಬಿಡಿ:

ADVERTISEMENT

'ಸರ್ಕಾರ ಬೀಳಿಸುತ್ತೇವೆ ಅನ್ನೋದು, ಅನಗತ್ಯ ಟೀಕೆ ಮಾಡುವುದು ಬಿಟ್ಟು ವಿರೋಧ ಪಕ್ಷದವರು ಭಾಗ್ಯಗಳ ಲಾಭವ ಸಿಗದ ಫಲಾನುಭವಿಗಳ ಗುರುತಿಸಿ ಅವರಿಗೆ ಕೊಡಿಸುವ ಕೆಲಸ ಮಾಡಲಿ' ಎಂದು ಮಧು ಬಂಗಾರಪ್ಪ ಹೇಳಿದರು.

ವಿರೋಧ ಪಕ್ಷದ ನಾಯಕ ಛಾಯಾ ಮುಖ್ಯಮಂತ್ರಿ ಇದ್ದಂತೆ. ಹೀಗಾಗಿ ಆರ್.ಅಶೋಕ್ ಅವರು ಘನತೆಯಿಂದ ಮಾತಾಡಬೇಕು.

ಸರ್ಕಾರ ಬೀಳಿಸುವ ಯೋಚನೆ, ಹುಚ್ಚು ಕೆಲಸ ಬಿಡಿ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.