ADVERTISEMENT

ಕಸ ವಿಲೇವಾರಿಗೆ ಜಾಗವೇ ನಿಗದಿಯಾಗಿಲ್ಲ, ಟೆಂಡರ್ ಹೇಗೆ ಸಾಧ್ಯ: ಡಿಸಿಎಂ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:09 IST
Last Updated 17 ಜುಲೈ 2024, 15:09 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

– ಪ್ರಜಾವಾಣಿಚ ಚಿತ್ರ

ಬೆಂಗಳೂರು: ‘ಬೆಂಗಳೂರಿನ ಘನತ್ಯಾಜ್ಯ ವಿಲೇವಾರಿ ಕೇಂದ್ರಗಳನ್ನು ನಗರದ ಹೊರಭಾಗಕ್ಕೆ ಸ್ಥಳಾಂತರ ಮಾಡಲು ಜಾಗವೇ ಇನ್ನೂ ನಿಗದಿಯಾಗಿಲ್ಲ. ಹೀಗಿರುವಾಗ ‘ಬ್ಲ್ಯಾಕ್‌ ಲಿಸ್ಟ್’ಗೆ ಸೇರಿರುವ ಕಂಪನಿಗೆ ಗುತ್ತಿಗೆ ನೀಡಲು ಹೇಗೆ ಸಾಧ್ಯ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

‘ಕಸದ ವಿಲೇವಾರಿ ಟೆಂಡರ್ ವಿಚಾರದಲ್ಲಿ ಕೇಂದ್ರದ ಮಂತ್ರಿಯೊಬ್ಬರು ನಾನು ₹15 ಸಾವಿರ ಕೋಟಿ ಲಂಚ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದಾರೆ. ನಾವು ಕಸ ವಿಲೇವಾರಿ ಮಾಡುವ ಜಾಗಗಳ ಹುಡುಕಾಟದಲ್ಲಿದ್ದೇವೆ. ಜಾಗ ನಿಗದಿ ಮಾಡಲು ನ್ಯಾಯ ಪಂಚಾಯಿತಿ ಮಾಡುತ್ತಾ ಒದ್ದಾಡುತ್ತಿದ್ದೇನೆ. ಇನ್ನೂ ಟೆಂಡರ್ ಕರೆದಿಲ್ಲ. ಹೀಗಿರುವಾಗ ‘ಬ್ಲಾಕ್ ಲಿಸ್ಟ್’ ಸೇರಿರುವ ಕಂಪನಿಗೆ 30 ವರ್ಷಗಳಿಗೆ ಗುತ್ತಿಗೆ ನೀಡಲು ಹೇಗೆ ಸಾಧ್ಯ? ಈ ವಿಚಾರ ಕೋರ್ಟ್‌ನಲ್ಲಿದೆ. ಕಳೆದ ಮೂರು ದಿನಗಳಿಂದ ಮಂಡೂರಿನಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದಕ್ಕೆ ಪರ್ಯಾಯ ಜಾಗ ಹುಡುಕುತ್ತಿದ್ದು, ನೈಸ್ ರಸ್ತೆ ಬಳಿ ಜಾಗಕ್ಕೆ ನೈಸ್ ಸಂಸ್ಥೆ ಜತೆ ಮಾತನಾಡುತ್ತಿದ್ದೇನೆ’ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ADVERTISEMENT

‘ಇನ್ನೂ ಎರಡು– ಮೂರು ಕಡೆ ಈಗಿರುವ ಕಸ ವಿಲೇವಾರಿ ಘಟಕಗಳನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರ ಮಾಡಬೇಕಿದೆ. ಈ ಸಮಸ್ಯೆ ಹೇಗೆ ನಿಭಾಯಿಸಬೇಕು ಎಂದು ಕೆಲವು ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಮುಖ್ಯಮಂತ್ರಿಯವರ ಜತೆ ಚರ್ಚೆ ಮಾಡಿ, ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿ, ನಂತರ ಸದನದ ಮುಂದಿಟ್ಟು ತೀರ್ಮಾನ ಮಾಡುತ್ತೇವೆ. ಇಷ್ಟು ದಿನ ಕಸದ ವಿಚಾರದಲ್ಲಿ ಟೆಂಡರ್ ಇಲ್ಲದೆ ದಂಧೆ ಮಾಡುತ್ತಿದ್ದವರಿಗೆ ನಮ್ಮ ಈ ಪ್ರಕ್ರಿಯೆ ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.