ADVERTISEMENT

ಬಿಜೆಪಿ ಆಡಳಿತದಲ್ಲಿ ಏಕೆ ಪ್ರಶ್ನಿಸಿಲ್ಲ:ಡಿಕೆಶಿಗೆ ಮಜುಂದಾರ್ ಶಾ ಉತ್ತರ ಹೀಗಿತ್ತು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 8:42 IST
Last Updated 19 ಅಕ್ಟೋಬರ್ 2025, 8:42 IST
   

'Not true... our agenda is clear...': Biocon chief Kiran Mazumdar reacts to Deputy CM DKS' accusation

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಕಸದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಬಿಜೆಪಿ ಸರ್ಕಾರ ಇದ್ದಾಗ ಏಕೆ ಪ್ರಶ್ನಿಸಲಿಲ್ಲ ಎಂದೂ ಕೇಳಿದ್ದರು. ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಮಂಜುದಾರ್, ಡಿಕೆಶಿ ಅವರ ಹೇಳಿದ್ದು ಸತ್ಯವಲ್ಲ ಎಂದು ಬರೆದುಕೊಂಡಿದ್ದಾರೆ.

ಎಕ್ಸ್‌ನಲ್ಲಿ ಡಿಸಿಎಂ ಹೇಳಿಕೆಯ ವಿಡಿಯೊ ಪೋಸ್ಟ್ ಹಂಚಿಕೊಂಡಿರುವ ಅವರು, ಬಿಜೆಪಿ ಮತ್ತು ಜೆಡಿಎಸ್ ಆಡಳಿತದ ಸಮಯದಲ್ಲಿಯೂ ನಗರದಲ್ಲಿನ ಮೂಲಸೌಕರ್ಯ ಪರಿಸ್ಥಿತಿಗಳ ಬಗ್ಗೆ ಟೀಕಿಸಿದ್ದೇವೆ ಎಂದಿದ್ದಾರೆ.

ADVERTISEMENT

ಡಿಸಿಎಂ ಹೇಳಿಕೆ ಕುರಿತು, ‘ಅದು ನಿಜವಲ್ಲ. ಮೋಹನ್ ದಾಸ್ ಪೈ ಮತ್ತು ನಾನು ಇಬ್ಬರೂ ನಮ್ಮ ನಗರದಲ್ಲಿನ ಮೂಲಸೌಕರ್ಯ ಹದಗೆಡುತ್ತಿರುವ ಬಗ್ಗೆ ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳಿದ್ದಾಗಲೂ ಟೀಕಿಸಿದ್ದೇವೆ. ನಮ್ಮ ಕಾರ್ಯಸೂಚಿ ಸ್ಪಷ್ಟ ಸ್ವಚ್ಛವಾಗಿಡುವುದು ಮತ್ತು ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದು’ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕಸದ ನಿರ್ವಹಣೆ ದೇಶದಾದ್ಯಂತ ಗಂಭೀರ ಪಿಡುಗಾಗಿದ್ದು, ದೊಡ್ಡ ನಗರಗಳ ಯಾವುದೇ ಪಾಲಿಕೆಯು ಅದನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿಲ್ಲ. ಇಂದೋರ್ ಮತ್ತು ಸೂರತ್ ಪರಿಹಾರ ಕಂಡುಕೊಂಡಂತೆ ಕಾಣುತ್ತಿದೆ. ಆದರೆ, ಮುಂಬೈ ದೆಹಲಿ ಮತ್ತು ಬೆಂಗಳೂರು ಇತ್ಯಾದಿ ನಗರಗಳಲ್ಲಿ ಕಸದ ಸಮಸ್ಯೆ ಪರಿಹರಿಸಿಲ್ಲ. ಇದು ತುಂಬಾ ಶೋಚನೀಯ ಸ್ಥಿತಿಯಾಗಿದೆ. ನಾಗರಿಕರಿಗೆ ನಾಗರಿಕ ಪ್ರಜ್ಞೆಯ ಕೊರತೆ ಮತ್ತು ನಾಗರಿಕರು ಹಾಗೂ ಆಡಳಿತ ಎರಡೂ ಕಡೆಯಿಂದಲೂ ಭಾರಿ ನಿರಾಸಕ್ತಿಯನ್ನು ತೋರಿಸುತ್ತದೆ’ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಡಿಕೆಶಿ,"ಹೌದು, ಸವಾಲುಗಳು ಇವೆ. ಆದರೆ, ನಾವು ಅವುಗಳ ಬಗ್ಗೆ ಗಮನ ಕೊಟ್ಟು ತುರ್ತಾಗಿ ಪರಿಗಣಿಸಿ ಪರಿಹರಿಸುತ್ತಿದ್ದೇವೆ. ಬೆಂಗಳೂರನ್ನು ಟೀಕಿಸಿ ಘನತೆ ಕುಗ್ಗಿಸುವ ಬದಲು ಒಟ್ಟಿಗೆ ನಿರ್ಮಿಸೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತದೆ. ಒಗ್ಗಟ್ಟಿನಿಂದ ನಗರವನ್ನು ಬೆಳೆಸಬೇಕಿದೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.