ನವದೆಹಲಿ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಗ್ರಾಮದ ಬಳಿ ಎರಡು ಚಿರತೆಗಳ ಕಳೇಬರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವಾಂಶದ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಎ) ನಿರ್ದೇಶನ ನೀಡಿದೆ.
ಗ್ರಾಮದಿಂದ ಸ್ವಲ್ಪ ದೂರದಲ್ಲಿ ಹಾದು ಹೋಗಿರುವ ರೈಲು ಹಳಿಯಿಂದ ಒಂದು ಮೀಟರ್ ದೂರದಲ್ಲಿ ಅಂದಾಜು ಮೂರರಿಂದ ಮೂರೂವರೆ ವರ್ಷದ ಹೆಣ್ಣು ಚಿರತೆಯ ಕಳೇಬರ ಪತ್ತೆಯಾಗಿತ್ತು. ಅಲ್ಲಿಂದ 30 ಮೀಟರ್ ದೂರದಲ್ಲಿ ಒಂದೂವರೆ ವರ್ಷದ ಗಂಡು ಚಿರತೆಯ ಶವ ಪತ್ತೆಯಾಗಿತ್ತು. ಎರಡು ಚಿರತೆಗಳಿಗೆ ತಲೆ ಮತ್ತು ಭುಜದ ಭಾಗದಲ್ಲಿ ಗಾಯವಾಗಿತ್ತು.
ಈ ಸಂಬಂಧ ಮುಖ್ಯ ವನ್ಯಜೀವಿ ವಾರ್ಡನ್ ಅವರಿಗೆ ಮಂಗಳವಾರ ಪತ್ರ ಬರೆದಿರುವ ಎನ್‌ಟಿಸಿಎ ಸಹಾಯಕ ಮಹಾನಿರ್ದೇಶಕಿ (ಅರಣ್ಯ) ಹರಿಣಿ ವೇಣುಗೋಪಾಲ್, ‘ಈ ಘಟನೆ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಪ್ರಾಧಿಕಾರಕ್ಕೆ ಶೀಘ್ರದಲ್ಲಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ. ಚಿರತೆಗಳ ಅನುಮಾನಾಸ್ಪದ ಸಾವಿನ ಕುರಿತು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಅವರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.