ADVERTISEMENT

Karnataka Covid Update | ರಾಜ್ಯದಲ್ಲಿ ಕೋವಿಡ್ ಪ್ರಮಾಣ ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2022, 15:24 IST
Last Updated 10 ಫೆಬ್ರುವರಿ 2022, 15:24 IST
ಕೋವಿಡ್ ಸೋಂಕು ಪ್ರಮಾಣದಲ್ಲಿ ಇಳಿಕೆ
ಕೋವಿಡ್ ಸೋಂಕು ಪ್ರಮಾಣದಲ್ಲಿ ಇಳಿಕೆ   

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಒಟ್ಟು 5,019 ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ.

ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದು, ಬೆಂಗಳೂರಿನಲ್ಲಿ 2,315 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.

ಪ್ರಸ್ತುತ ಪಾಸಿಟಿವಿಟಿ ದರ ರಾಜ್ಯದಲ್ಲಿ ಶೇ 4.25 ಇದ್ದರೆ, ಬೆಂಗಳೂರಿನಲ್ಲಿ ಶೇ 4 ರಷ್ಟಿದೆ.

ADVERTISEMENT

ಗುರುವಾರ 13,923 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 52,013 ಇದ್ದರೆ, ಬೆಂಗಳೂರಿನಲ್ಲಿ 21 ಸಾವಿರ ಇದೆ. ಅಲ್ಲದೆ, ಇಂದು ಒಟ್ಟು 39 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರೆ, ಬೆಂಗಳೂರಿನಲ್ಲಿ 17 ಸಾವು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.