ಪ್ರಾತಿನಿಧಿಕ ಚಿತ್ರ
ಮೈಸೂರು: 'ಒಡನಾಡಿ' ಸೇವಾ ಸಂಸ್ಥೆಗೆ ಸೋಮವಾರ ಭೇಟಿ ನೀಡಿದ ರಾಜ್ಯ ಗುಪ್ತಚರ ಇಲಾಖೆ ಸಿಬ್ಬಂದಿ, ಸಂಸ್ಥೆಯ 3 ವರ್ಷದ ಹಣಕಾಸು ವಹಿವಾಟಿನ ವರದಿಯ ಪ್ರತಿಗಳನ್ನು ಸಂಗ್ರಹಿಸಿದರು.
'ಇಲಾಖೆಯ ಇಬ್ಬರು ಕಚೇರಿಗೆ ಆಗಮಿಸಿದ್ದರು. ಗುಪ್ತಚರ ಇಲಾಖೆಯ ಐಜಿ ಸೂಚನೆಯಂತೆ ಕಳೆದ 3 ವರ್ಷಗಳ ಆಡಿಟ್ ರಿಪೋರ್ಟ್ ಪಡೆದಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದ ಮಹಿಳೆಯ ಬಗ್ಗೆ ವಿಚಾರಿಸಿದರು, ಅವರು ಕೇಳಿರುವ ಮಾಹಿತಿ ನೀಡಿದ್ದೇವೆ' ಎಂದು ಒಡನಾಡಿ ನಿರ್ದೇಶಕ ಪರಶು 'ಪ್ರಜಾವಾಣಿ'ಗೆ ತಿಳಿಸಿದರು.
'ಕೆಲ ದಿನಗಳ ಹಿಂದೆ ಇಡಿ ದಾಳಿ ನಡೆಸಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈಗ ಗುಪ್ತಚರ ಇಲಾಖೆಯವರೂ ಆಗಮಿಸಿ, ಯಾವುದೇ ನೋಟಿಸ್ ನೀಡದೆ ತೆರಳಿದ್ದಾರೆ. ನಮ್ಮ ವ್ಯವಹಾರಗಳು ಪಾರದರ್ಶಕವಾಗಿದ್ದು, ಯಾವುದೇ ರೀತಿಯ ತನಿಖೆಯನ್ನೂ ಸ್ವಾಗತಿಸುತ್ತೇವೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.