ADVERTISEMENT

ಕಾಣಿಕೆ ಹುಂಡಿಯಲ್ಲಿ ಹಳೆ ನೋಟುಗಳ ರಾಶಿ!

ನೋಟು ನಿಷೇಧಕ್ಕೆ 2 ವರ್ಷ: ಈಗಲೂ ಹುಂಡಿಗೆ ಬೀಳುತ್ತಿರುವ ಹಳೆಯ ₹500 ನೋಟು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 20:23 IST
Last Updated 4 ನವೆಂಬರ್ 2018, 20:23 IST
ಕುಂದಾಪುರ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಹುಂಡಿಯಲ್ಲಿ ಬಂದಿರುವ ಕಾಣಿಕೆಗಳ ಲೆಕ್ಕಾಚಾರವನ್ನು ಮಾಡುತ್ತಿರುವ ಶ್ರೀ ಮೂಕಾಂಬಿಕಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು.
ಕುಂದಾಪುರ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಹುಂಡಿಯಲ್ಲಿ ಬಂದಿರುವ ಕಾಣಿಕೆಗಳ ಲೆಕ್ಕಾಚಾರವನ್ನು ಮಾಡುತ್ತಿರುವ ಶ್ರೀ ಮೂಕಾಂಬಿಕಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು.   

ಕುಂದಾಪುರ: ಕೇಂದ್ರ ಸರ್ಕಾರ ₹500 ಹಾಗೂ ₹1,000ದ ಮುಖಬೆಲೆಯ ಹಳೆಯ ನೋಟುಗಳನ್ನು ನಿಷೇಧ ಮಾಡಿ ಎರಡು ವರ್ಷ ತುಂಬುತ್ತಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕ್ಕೆ ಈಗಲೂ ಹಳೆ ನೋಟುಗಳು ಬಂದ ಬೀಳುತ್ತಲೇ ಇವೆ.

ನವರಾತ್ರಿಯ ಉತ್ಸವದ ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹುಂಡಿಯ ಲೆಕ್ಕಾಚಾರಕ್ಕೆ ಮುಂದಾಗಿದ್ದ ದೇವಸ್ಥಾನದ ಆಡಳಿತ ವರ್ಗಕ್ಕೆ ಈ ಬಾರಿಯೂ ನಿರೀಕ್ಷೆಯಂತೆ ನಿಷೇಧಿತ ₹500 ಮುಖಬೆಲೆಯ ಹಳೆ ನೋಟುಗಳು ಹುಂಡಿಯಲ್ಲಿ ದೊರೆತಿವೆ. ಹೊಸ ನೋಟುಗಳು, ಚಿಲ್ಲರೆಗಳು, ವಿದೇಶಿ ಡಾಲರ್‌ಗಳು, ಚಿನ್ನ ಹಾಗೂ ಬೆಳ್ಳಿಯ ವಸ್ತುಗಳ ಜತೆಯಲ್ಲಿ ಹುಂಡಿ ಸೇರಿರುವ ಹಳೆಯ ನೋಟುಗಳನ್ನು ಲೆಕ್ಕಾಚಾರ ಮಾಡಿ ಬದಿಗಿರಿಸುವ ಕಾರ್ಯ ದೇವಸ್ಥಾನದಿಂದ ನಡೆಯುತ್ತಿದೆ.

ದೇವಸ್ಥಾನದ ಹುಂಡಿಗಳಿಗೆ ಬಂದು ಬೀಳುತ್ತಿರುವ ಈ ಹಳೆಯ ನೋಟುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಚಿಂತೆ ಒಂದೆಡೆಯಾದರೆ; ಬೆಲೆ ಇಲ್ಲದ ನೋಟುಗಳನ್ನು ತಂದು ಹುಂಡಿಗೆ ಹಾಕುತ್ತಿರುವ ಭಕ್ತರ ಮನೋ ಭಾವವನ್ನು ಬದಲಾವಣೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗಳು ದೇವಸ್ಥಾನದ ಆಡಳಿತ ಮಂಡಳಿಯನ್ನು ಕಾಡುತ್ತಿವೆ.

ADVERTISEMENT

*
ದೇವಸ್ಥಾನದ ಹುಂಡಿಯಲ್ಲಿ ಬೀಳುತ್ತಿರುವ ಹಳೆಯ ನೋಟು ಬದಲಾವಣೆಗೆ ಕೇಂದ್ರ ಸರ್ಕಾರ ಒಂದು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರಬೇಕು.
-ಎಚ್‌.ಹಾಲಪ್ಪ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ

*
ಬೆಲೆ ಇಲ್ಲದ ₹500, 1000ದ ನೋಟುಗಳನ್ನು ದೇವರ ಹುಂಡಿಗೆ ಹಾಕುವ ಮೊದಲು ಭಕ್ತರು ಆಲೋಚನೆ ಮಾಡಬೇಕು.
-ವಂಡಬಳ್ಳಿ ಜಯರಾಮ್‌, ಶೆಟ್ಟಿವ್ಯವಸ್ಥಾಪನಾ ಸಮಿತಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.