ADVERTISEMENT

ಆನ್‌ಲೈನ್: ಸಂವಹನಕ್ಕೆ ಹೆಚ್ಚು ಅವಕಾಶ

‘ಶೇ 34ರಷ್ಟು ಬೋಧಕರು ಆನ್‌ಲೈನ್ ಬೋಧನೆ ಪರ’– ಸಿಎಂಆರ್‌ ವಿವಿ ತಂಡದಿಂದ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 19:27 IST
Last Updated 14 ಸೆಪ್ಟೆಂಬರ್ 2020, 19:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
""

ಬೆಂಗಳೂರು: ತರಗತಿಯ ಕಲಿಕೆಗಿಂತ ಆನ್‌ಲೈನ್‌ ಬೋಧನೆಯಲ್ಲಿ ವಿದ್ಯಾರ್ಥಿಗಳ ಜೊತೆ ಹೆಚ್ಚು ಸಂವಹನ ಸಾಧ್ಯ ಎಂದು ಶೇ 34ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಶೇ 38ರಷ್ಟು ಶಿಕ್ಷಕರು ಆನ್‌ಲೈನ್‌ ಬೋಧನೆ ವಿದ್ಯಾರ್ಥಿಗಳ ಜತೆ ಹೆಚ್ಚು ಸಂವಹನಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಶೇ 28ರಷ್ಟು ಶಿಕ್ಷಕರು ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ‘ಆನ್‌ಲೈನ್‌ ಬೋಧನೆಯ ಬಗ್ಗೆ ಶಿಕ್ಷಕರಿಗಿರುವ ತೃಪ್ತಿ’ ವಿಷಯ ಕುರಿತು ಸಿಎಂಆರ್‌ ಖಾಸಗಿ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಂಶೋಧನಾ ತಂಡ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯವಿದು.

ಸಂಶೋಧಕರಾದ ಗುರುರಾಜ್‌ ಮತ್ತು ವಿವೇಕಾನಂದ ಅವರು ಜೆ. ಪ್ರವೀಣ್‌ ಮತ್ತು ಪಾಲನೇತ್ರಾ ಅವರ ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆಸಿದ್ದರು.

ADVERTISEMENT

ಪ್ರಾಥಮಿಕ ಶಿಕ್ಷಕರಿಂದ ಹಿಡಿದು ದ್ವಿತೀಯ ಪಿಯು ಬೋಧಕರವರೆಗಿನ 1,040 ಶಿಕ್ಷಕರನ್ನು ಜೂನ್‌ ಮೂರನೇ ವಾರದಲ್ಲಿ ಸಮೀಕ್ಷೆಗೆ ಒಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ.

‘ಆನ್‌ಲೈನ್‌ನಲ್ಲಿ ಬೋಧನೆಯ ರೀತಿಯ ಬಗ್ಗೆ ಶೇ 96ರಷ್ಟು ಶಿಕ್ಷಕರಿಗೆ ಅನುಭವ ಇಲ್ಲ. ಹೀಗಾಗಿ ಈ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ನೇರ ತರಗತಿ ಆರಂಭಗೊಂಡ ಬಳಿಕವೂ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆಯನ್ನು ನಿರಂತರವಾಗಿ ಮುಂದುವರಿಸಬೇಕು. ಆನ್‌ಲೈನ್‌ ಶಿಕ್ಷಣದ ಬಗ್ಗೆ ಹೆಚ್ಚು ಸಂಶೋಧನೆ ಆಗಬೇಕು. ಅಂತರ್ಜಾಲ ಸಂಪರ್ಕ ವ್ಯವಸ್ಥೆ ಇನ್ನೂ ತಲುಪದ ಕಡೆಗಳಲ್ಲಿ ಶಿಕ್ಷಣಕ್ಕಾಗಿ ಯಾವ ರೀತಿಯ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಂಶೋಧನಾ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.