ADVERTISEMENT

ಜಾತಿ ಹೆಸರಲ್ಲಿ ರಕ್ಷಣೆಗೆ ಸಿಎಂ ಹತಾಶ ಯತ್ನ: ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 18:36 IST
Last Updated 12 ಜುಲೈ 2024, 18:36 IST
<div class="paragraphs"><p>ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ‘ಮುಡಾ ಭೂಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಹೆಸರಿನಲ್ಲಿ ರಕ್ಷಣೆ ಪಡೆ ಯುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.

ತಾವು ಹಿಂದುಳಿದ ವರ್ಗಕ್ಕೆ ಸೇರಿದ್ದೇ ನೆಂಬ ಕಾರಣಕ್ಕೆ ತಮ್ಮನ್ನು ಗುರಿಯಾಗಿಸ ಲಾಗಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ‘ಎಕ್ಸ್‌’ ಮೂಲಕ ಅಶೋಕ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ತಮ್ಮ ಇಡೀ ಜೀವನವನ್ನು ‘ಅಹಿಂದ’ ಸಮುದಾಯಗಳ ಬೆನ್ನಿನ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿ
ಸಿದ ಸಿದ್ದರಾಮಯ್ಯ, ದಲಿತರಿಗೆ, ಹಿಂದು ಳಿದವರಿಗೆ ಮಾಡಿದ್ದಾದರೂ ಏನು? ದಲಿತರ ದುಡ್ಡು ಲೂಟಿ ಹೊಡೆದಿದ್ದು, ದಲಿತರ ಕುರ್ಚಿ ಕಿತ್ತುಕೊಂಡು ಅವರಿಗೆ ಮೋಸ ಮಾಡಿದ್ದು, ಇದಿಷ್ಟೇ ಅವರ ಸಾಧನೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅವರ ಪಾಪದ ಕೊಡ ತುಂಬಿದೆ. ಪ್ರಾಯಶ್ಚಿತ ಕಾದಿದೆ’ ಎಂದು ಹೇಳಿದ್ದಾರೆ.

‘ಮುಡಾ ಭೂಹಗರಣದಲ್ಲಿ  ತಮ್ಮನ್ನು ರಕ್ಷಿಸಿಕೊಳ್ಳಲು ಸುಮಾರು ಆರು ಕೋಟಿ ಕನ್ನಡಿಗರ ಮುಖ್ಯಮಂತ್ರಿ ಒಬಿಸಿ ಹಣೆಪಟ್ಟಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಈ ಮೂಲಕ ಅವರು ಹಿಂದುಳಿದ ವರ್ಗಗಳ ಕನ್ನಡಿಗ ರನ್ನು ಅವಮಾನಿಸುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ  ಒಪ್ಪಿಸುವುದೇ ಸೂಕ್ತ’ ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್‌ ಸಿಂಗ್‌ ಸಿರೋಯ ಎಂದು ಹೇಳಿದ್ದಾರೆ.

ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರು 2ನೇ ಬಾರಿ ಮುಖ್ಯಮಂತ್ರಿ ಆಗಿದ್ದು, ಇದನ್ನು ಸಹಿಸದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಪದಚ್ಯುತಿಗೆ ತೆರೆಮರೆಯಲ್ಲಿ ಹುನ್ನಾರ ನಡೆಸುತ್ತಿದ್ದಾರೆ
-ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ
ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ನೀಡಿದೆ. ಅದರ ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು. ಈಗಲೇ ಬಿಜೆಪಿಯವರು ಸಿ.ಎಂ ರಾಜೀನಾಮೆ ಕೇಳುವುದು ಸರಿಯಲ್ಲ
ಈ.ತುಕಾರಾಂ, ಬಳ್ಳಾರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.