ADVERTISEMENT

ಅಪಶಕುನ ಎಂದು ಹೀಗಳೆಯುವ ಗೂಬೆಗೆ ₹ 5 ಲಕ್ಷ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 17:18 IST
Last Updated 23 ಅಕ್ಟೋಬರ್ 2018, 17:18 IST
ಸಾಗಣೆ ಮಾಡುತ್ತಿದ್ದ ಗೂಬೆಯೊಂದಿಗೆ ಆರೋಪಿಗಳು
ಸಾಗಣೆ ಮಾಡುತ್ತಿದ್ದ ಗೂಬೆಯೊಂದಿಗೆ ಆರೋಪಿಗಳು   

ಮೈಸೂರು: ಅಪಶಕುನ ಎಂದು ಹೀಗಳೆಯುವ ಗೂಬೆಗೂ ಕಾಳಸಂತೆಯಲ್ಲಿ ₹ 5 ಲಕ್ಷ ಬೆಲೆ ಸಿಗುತ್ತಿದೆ ಎಂದು ಗೂಬೆ ಸಾಗಣೆ ಮಾಡುತ್ತಿದ್ದ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ಮೈಸೂರು– ಬೆಂಗಳೂರು ರಸ್ತೆಯಲ್ಲಿ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಗೂಬೆ ವಶಪಡಿಸಿಕೊಂಡ ಅರಣ್ಯ ಸಂಚಾರ ದಳದ ಪೊಲೀಸರು, ನಾಗಮಂಗಲ ತಾಲ್ಲೂಕು ಶಿಕಾರಿಪುರದ ಎಸ್.ಆರ್.ಶ್ರೀಧರ್ ಹಾಗೂ ವಿರಾಜಪೇಟೆ ತಾಲ್ಲೂಕಿನ ಬಿಳಗುಂದ ಗ್ರಾಮದ ಬಿ.ಎ.ರವೀಶರಾವ್ ಎಂಬುವರನ್ನು ಬಂಧಿಸಿದ್ದರು.‌

ಸಾಗಣೆ ಮಾಡುತ್ತಿದ್ದ ಗೂಬೆಯು ‘ಇಂಡಿಯನ್ ಈಗಲ್’ ಗೂಬೆ ತಳಿ ಯಾಗಿದೆ. ಕಾಳಸಂತೆಯಲ್ಲಿ ₹ 5 ಲಕ್ಷಕ್ಕೆ ಮಾರಾಟವಾಗುತ್ತಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.