ADVERTISEMENT

ಪಾದರಾಯನಪುರ ಗಲಭೆ | ಮತ್ತಷ್ಟು ಕಿಡಿಗೇಡಿಗಳ ಬಂಧನ: ಸಚಿವ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 5:49 IST
Last Updated 20 ಏಪ್ರಿಲ್ 2020, 5:49 IST
ಪಾದರಾಯನಪುರಕ್ಕೆ ಗೃಹಸಚಿವ ಬಸವರಾಜ ಬೊಮ್ಮಾಯಿ ಭೇಟಿ
ಪಾದರಾಯನಪುರಕ್ಕೆ ಗೃಹಸಚಿವ ಬಸವರಾಜ ಬೊಮ್ಮಾಯಿ ಭೇಟಿ   

ಬೆಂಗಳೂರು: ಭಾನುವಾರ ಪಾದರಾಯನಪುರದಲ್ಲಿ ನಡೆದ ಘಟನೆ ಸಂಬಂಧ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು,ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ‌ ದಾಳಿ ಮಾಡಿ ಹಲ್ಲೆ ನಡೆಸುವ ಪ್ರಯತ್ನ ಮಾಡಲಾಗಿದೆ. ಘಟನೆಯ ಕೆಲವೇಗಂಟೆಯಲ್ಲಿ 54ಜನರನ್ನು ಬಂಧಿಸಲಾಗಿದೆ. ಮತ್ತಷ್ಟು ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಸಚಿವತಿಳಿಸಿದ್ದಾರೆ.

ಬಂಧಿತರ ವಿರುದ್ದ ಎನ್‌‌ಡಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಘಟನೆ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತರನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಸೆಕೆಂಡರಿ ಕಾಂಟ್ಯಾಕ್ಟ್ ಇರುವ ಜನ ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್ ಗೆ ಸಹಕಾರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ADVERTISEMENT

ಕೋವಿಡ್ ತಡೆಗೆ ಎಲ್ಲಾಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ. ಜನತೆ ಸರ್ಕಾರದ ಜತೆ ಸಹಕರಿಸಬೇಕು. ‌ಅಧಿಕಾರಿಗಳ ಕರ್ತವ್ಯಕ್ಕೆ
ಅಡ್ಡಿಪಡಿಸಿ ಸಮಸ್ಯೆ ಮಾಡಿದರೆ ಕಠೋರ ಕ್ರಮ‌ ಜರುಗಿಸಲಾಗುವುದು.ಪಾದರಾಯನಪುರದ ಹಿಂದೆ ಕೆಎಫ್‌ಡಿಯ ಕೆಲವು ಪುಡಿ ನಾಯಕರು ಗಲಭೆಗೆ ಪ್ರಚೋದನೆ ನೀಡಿದ್ದು ಇಂತಹವರಿಗೆ ಪೊಲೀಸ್ಆಕ್ಷನ್ ಏನೆಂಬುದನ್ನು ತೋರಿಸುತ್ತೇವೆ. ಪುಂಡಾಟಿಕೆ ಮಾಡುವವರನ್ನು ಮುಲಾಜಿಲ್ಲದೆ ಅಡಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ತಡೆಯುವ ನಿಟ್ಟಿನಲ್ಲಿ ಯಾವಾಗಾ ಏನು ಕ್ರಮ ಕೈಗೊಳ್ಳಬೇಕಿದೆ.‌ ಶಾಸಕಜಮೀರ್ ಅಹ್ಮದ್ ಏನೇ ಹೇಳಿಕೆ ನೀಡಿದರೂ ಅವರು ಸರ್ಕಾರವಲ್ಲ.‌ ಯಾರು ಯಾವಾಗ ಹೇಗೆ ನಡೆದುಕೊಳ್ಳಬೇಕುಎಂಬುದು ಅಧಿಕಾರಿಗಳಿಗೆ ತಿಳಿದಿದೆ. ನಾವು ಇಂತಹ ಪುಂಡರನ್ನು ಮಟ್ಟ ಹಾಕದೆ ಬಿಡುವುದಿಲ್ಲ ಎಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.