ADVERTISEMENT

ಪದ್ಮ ಪ್ರಶಸ್ತಿ: ಶತಾವಧಾನಿ ಗಣೇಶ್, ಅಂಕೇಗೌಡ, ಸುಶೀಲಮ್ಮ ಸೇರಿ 8 ಸಾಧಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 10:51 IST
Last Updated 25 ಜನವರಿ 2026, 10:51 IST
<div class="paragraphs"><p>ಅಂಕೇಗೌಡ,&nbsp;ಸುರೇಶ್‌ ಹನಗವಾಡಿ,&nbsp;ಸುಶೀಲಮ್ಮ</p></div>

ಅಂಕೇಗೌಡ, ಸುರೇಶ್‌ ಹನಗವಾಡಿ, ಸುಶೀಲಮ್ಮ

   

ಬೆಂಗಳೂರು: 2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದ್ದು ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಶತಾವಧಾನಿ ಆರ್​​. ಗಣೇಶ್​​ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ.

ರಾಜ್ಯದ ಪುಸ್ತಕ ಪ್ರೇಮಿ ಅಂಕೇಗೌಡ, ವೈದ್ಯ ಸುರೇಶ್‌ ಹನಗವಾಡಿ, ಸಮಾಜ ಸೇವಕಿ ಸುಶೀಲಮ್ಮ ಸೇರಿ ಏಳು ಸಾಧಕರು ಈ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ADVERTISEMENT

ಈ ಸಲ ರಾಜ್ಯಕ್ಕೆ ಒಂದು ಪದ್ಮ ಭೂಷಣ, 7 ಪದ್ಮಶ್ರೀ ಸೇರಿ ಒಟ್ಟು 8 ಪದ್ಮ ಪ್ರಶಸ್ತಿಗಳು ಬಂದಿವೆ.

ಗಣರಾಜ್ಯೋತ್ಸವದ ಮುನ್ನಾದಿನವಾದ ಭಾನುವಾರ ಕೇಂದ್ರ ಗೃಹ ಸಚಿವಾಲಯ ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದೆ.

ಮಂಡ್ಯ ಮೂಲದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ವೈದ್ಯ ಡಾ ಸುರೇಶ್‌ ಹನಗವಾಡಿ ಹಾಗೂ ಬೆಂಗಳೂರಿನ ಸಮಾಜ ಸೇವಕಿ ಎಸ್‌.ಜಿ ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯಸಿದೆ.

ದೇಶದ 131 ಸಾಧಕರಿಗೆ ಪದ್ಮ ಪ್ರಶಸ್ತಿಗಳು ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.