ADVERTISEMENT

Tulsi Gowda Death: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 14:27 IST
Last Updated 16 ಡಿಸೆಂಬರ್ 2024, 14:27 IST
<div class="paragraphs"><p>ತುಳಸಿ ಗೌಡ</p></div>

ತುಳಸಿ ಗೌಡ

   

ಕಾರವಾರ: ಗಿಡಗಳ ಆರೈಕೆ ಮೂಲಕ ಪ್ರಸಿದ್ಧಿ ಪಡೆದು, ಇದೇ ಕಾರಣಕ್ಕೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಅಂಕೋಲಾ ತಾಲ್ಲೂಕು ಹೊನ್ನಳ್ಳಿಯ ತುಳಸಿ ಗೌಡ (86) ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ಕೆಲ ತಿಂಗಳುಗಳಿಂದ ಅವರು ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೃತರಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ.

ADVERTISEMENT

ಜೀವನಾಧಾರಕ್ಕೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ ತುಳಸಿ ಗಿಡಗಳ ಆರೈಕೆಗೆ ಜೀವನ ಮುಡಿಪಿಟ್ಟಿದ್ದರು. ನಿವೃತ್ತಿ ಬಳಿಕವೂ ಸಸಿಗಳನ್ನು ನೆಡುವ, ಪೋಷಿಸುವ ಕೆಲಸ ಮಾಡಿದ್ದರು. ಈವರೆಗೆ ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಅವರು ಬೆಳೆಸಿದ್ದಾರೆ. 1999ರಲ್ಲಿ ‘ರಾಜ್ಯೋತ್ಸವ’ ಪ್ರಶಸ್ತಿ, ‘ಇಂದಿರಾ ಪ್ರಿಯದರ್ಶಿನಿ’ ಪ್ರಶಸ್ತಿ ನೀಡಲಾಗಿತ್ತು. 2020ರಲ್ಲಿ ಕೇಂದ್ರ ಸರ್ಕಾರ ‘ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. 2022ರಲ್ಲಿ ಅದನ್ನು ಪ್ರದಾನ ಮಾಡಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.