ADVERTISEMENT

‘ಕೈ’ಗೆ ಪಾ‘ಕೈ’ಸ್ತಾನ್ ಎಂದು ಕೆರಳಿಸಿದ ಬಿಜೆಪಿ: ಕಾನೂನು ಕ್ರಮ ಎಂದ ಕಾಂಗ್ರೆಸ್

ವಿಧಾನಸೌಧದ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ–ಕಾಂಗ್ರೆಸ್ ವಾಕ್ಸಮರ ತೀವ್ರ ಬಿರುಸು ಪಡೆದುಕೊಂಡಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2024, 14:24 IST
Last Updated 28 ಫೆಬ್ರುವರಿ 2024, 14:24 IST
<div class="paragraphs"><p>ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್</p></div>

ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್

   

ಬೆಂಗಳೂರು: ವಿಧಾನಸೌಧದ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ–ಕಾಂಗ್ರೆಸ್ ವಾಕ್ಸಮರ ತೀವ್ರ ಬಿರುಸು ಪಡೆದುಕೊಂಡಿದೆ.

ಇನ್ನು, X ತಾಣದಲ್ಲಿ ಬಿಜೆಪಿ ಹಾಕಿರುವ ಪೋಸ್ಟರ್‌ ಒಂದು ಕಾಂಗ್ರೆಸ್ ಅನ್ನು ತೀವ್ರ ಕೆರಳಿಸಿದೆ. ಆ ಪೋಸ್ಟರ್ ಅನ್ನು ತೆಗೆದು ಹಾಕದಿದ್ದರೇ ಗ್ಯಾರಂಟಿ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ADVERTISEMENT

ಇಂದು ಮಧ್ಯಾಹ್ನ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ವಿಶೇಷ ಪೋಸ್ಟರ್ ಜೊತೆ ಕಾಂಗ್ರೆಸ್ ಅನ್ನು ಕೆರಳಿಸಿದೆ. ಹಸಿರು ಬಣ್ಣದ ಹಸ್ತದ ಚಿತ್ರದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಚಿತ್ರಿಸಿ, ಅದಕ್ಕೆ ಪಾ‘ಕೈ’ಸ್ತಾನ್ ಎಂದು ಬರೆದಿದೆ.

ಭಾರತದಲ್ಲಿ ಪಾ"ಕೈ"ಸ್ತಾನವನ್ನು ಬೆಂಬಲಿಸುವವರ "ಕೈ"ಗಳನ್ನು ಹೆಡೆಮುರಿ ಕಟ್ಟಿ ಎಂದು ಆಗ್ರಹಿಸಿದೆ.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದಿದೆ.

ಕಾಂಗ್ರೆಸ್‌ನ ಇದೇ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಬಿಜೆಪಿ, ನೀವು ದೂರು ದಾಖಲಿಸುವುದು ಪಾಕಿಸ್ತಾನದಲ್ಲೋ ಅಥವಾ ಭಾರತದಲ್ಲೋ? ಎಂದು ಪ್ರಶ್ನೆ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.