ADVERTISEMENT

ಸಂಸುದ್ದಿಯಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠ?

ಮಠಾಧೀಶರ ಒಕ್ಕೂಟದ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 21:02 IST
Last Updated 2 ಸೆಪ್ಟೆಂಬರ್ 2021, 21:02 IST
ವಚನಾನಂದ ಶ್ರೀ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮನಗೂಳಿ ಮಠದ ಸಂಗನಬಸವ ಸ್ವಾಮೀಜಿ
ವಚನಾನಂದ ಶ್ರೀ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮನಗೂಳಿ ಮಠದ ಸಂಗನಬಸವ ಸ್ವಾಮೀಜಿ   

ಬಾಗಲಕೋಟೆ/ಜಮಖಂಡಿ: ಪಂಚಮಸಾಲಿ ಸಮುದಾಯದ ಮೂರನೇ ಪೀಠಕ್ಕೆಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಸಂಸುದ್ದಿ ಗ್ರಾಮದಲ್ಲಿ ಎರಡು ಎಕರೆ ಜಮೀನು ಗುರುತಿಸಲಾಗಿದೆ.

ಪಂಚಮಸಾಲಿ ಸಮಾಜದ ಕೂಡಲಸಂಗಮ ಹಾಗೂ ಹರಿಹರ ಪೀಠಗಳಿಗೆ ಪರ್ಯಾಯವಾಗಿ ಆ ಸಮುದಾಯದ ಸ್ವಾಮೀಜಿಗಳ ಪ್ರತ್ಯೇಕ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಜೊತೆಗೆ ಇದು ಮೂರನೇ ಪೀಠ ಸ್ಥಾಪನೆಗೂ ನಾಂದಿಯಾಗಿದೆ.ಶ್ರಾವಣ ಮುಗಿದ ಮೇಲೆ ಮೂರನೇ ಪೀಠದ ಸಂಪೂರ್ಣ ಚಿತ್ರಣ ದೊರೆಯಲಿದೆ ಎಂದು ಹೇಳಲಾಗಿದೆ.

ಜಮಖಂಡಿಯಲ್ಲಿ ಬುಧವಾರ ನಡೆದ ಮಠಾಧೀಶರ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾಗಿ ವಿಜಯಪುರ ಜಿಲ್ಲೆ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ 15ಕ್ಕೂ ಹೆಚ್ಚು ಸ್ವಾಮೀಜಿಗಳು, ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್‌ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ADVERTISEMENT

ಸಂಗನಬಸವ ಶ್ರೀಗಳೇ ಪೀಠಾಧಿಪತಿ?: ವಿಜಯಪುರ ಜಿಲ್ಲೆಯ ಮನಗೂಳಿ ಸಂಗನಬಸವ ಸ್ವಾಮೀಜಿಯನ್ನು ಪೀಠಾಧಿಪತಿಯಾಗಿ ನೇಮಿಸಲುಹಾಗೂ ಸಂಸುದ್ದಿಯಲ್ಲಿ ಮೂರನೇ ಪೀಠದ ಆಶ್ರಮ, ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಅನಾಥಾಶ್ರಮ, ವೃದ್ಧಾಶ್ರಮ ನಿರ್ಮಿಸಲು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

‘ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆ ಇರುವ ದೊಡ್ಡ ಸಮುದಾಯ. ಹೀಗಾಗಿ ಐದು ಪೀಠಗಳು ಬೇಕು ಎಂದು ಈ ಹಿಂದೆ ಹರಿಹರ ಪೀಠದ ಮೊದಲ ಶ್ರೀಗಳಾಗಿದ್ದ ಡಾ.ಮಹಾಂತ ಶಿವಾಚಾರ್ಯರು ಹೇಳಿದ್ದರು. ಆದರೆ ಅವರು ಲಿಂಗೈಕ್ಯರಾಗಿದ್ದರಿಂದ ಅವರ ಆಸೆ ಈಡೇರಿರಲಿಲ್ಲ. ಈಗ ಜನರಿಂದ ಒತ್ತಡ ಬಂದರೆ ಮೂರನೇ ಪೀಠ ಆಗಬಹುದು’ ಎಂದು ಜಮಖಂಡಿ ಸಭೆಯ ನಂತರ ಸಂಗನಬಸವ ಶ್ರೀಗಳು ಮಾರ್ಮಿಕವಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.