ADVERTISEMENT

13.36 ಲಕ್ಷ ಹೊಸ ಚಂದಾದಾರರ ನೋಂದಣಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 16:28 IST
Last Updated 23 ಮಾರ್ಚ್ 2021, 16:28 IST

banga: ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯಲ್ಲಿ ಜನವರಿಯಲ್ಲಿ ಒಟ್ಟು 13.36 ಲಕ್ಷ ಹೊಸ ಚಂದಾದಾರರು ನೋಂದಣಿಯಾಗಿದ್ದಾರೆ.

‘ಕೋವಿಡ್‌ ಬಿಕ್ಕಟ್ಟಿನ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಭವಿಷ್ಯನಿಧಿ ಯೋಜನೆಯ ಅಡಿಯಲ್ಲಿ 62.49 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ. 2020ರ ಡಿಸೆಂಬರ್‌ಗೆ ಹೋಲಿಸಿದರೆ 2021ರ ಜನವರಿಯಲ್ಲಿ ಶೇ 24ರಷ್ಟು ಬೆಳವಣಿಗೆಯಾಗಿದೆ. ವರ್ಷದಿಂದ ವರ್ಷಕ್ಕೆ ಚಂದಾದಾರರ ಸಂಖ್ಯೆಯಲ್ಲಿ ಶೇ 27.79ರಷ್ಟು ಹೆಚ್ಚಳವಾಗಿರುವುದು ಅಂಕಿ ಅಂಶದಿಂದ ತಿಳಿದುಬಂದಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಕೋವಿಡ್‌ ಸಮಯದಲ್ಲಿ ಭವಿಷ್ಯನಿಧಿ ಸಂಘಟನೆಯು ತಡೆರಹಿತ ಆನ್‌ಲೈನ್‌ ಸೇವೆಗಳನ್ನು ಒದಗಿಸಿತ್ತು. ಜೊತೆಗೆ ಭಾರತ ಸರ್ಕಾರದ ಎಬಿಆರ್‌ವೈ, ಪಿಎಂಜಿಕೆವೈ ಮತ್ತು ಪಿಎಂಆರ್‌ಪಿವೈ ಯೋಜನೆಗಳೂ ಈ ಬೆಳವಣಿಗೆಗೆ ಕಾರಣ. ಸದಸ್ಯರು ಕೆಲಸ ಬದಲಿಸುವಾಗ ತಮ್ಮ ಭವಿಷ್ಯ ನಿಧಿ ಹಣ ವರ್ಗಾಯಿಸಲು ಸ್ವಯಂ ವರ್ಗಾವಣೆ ಸೇವೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರ ಸದಸ್ಯತ್ವದಲ್ಲಿ ನಿರಂತರತೆ ಕಂಡುಬರುತ್ತಿದೆ’ ಎಂದೂ ಹೇಳಲಾಗಿದೆ.

ADVERTISEMENT

‘ಈ ವರ್ಷದ ಜನವರಿಯಲ್ಲಿ ಸುಮಾರು 2.61 ಲಕ್ಷ ಮಹಿಳಾ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಡಿಸೆಂಬರ್‌ಗೆ ಹೋಲಿಸಿದರೆ ಈ ಪ್ರಮಾಣ ಶೇ 30ರಷ್ಟು ಹೆಚ್ಚಿದೆ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.