ADVERTISEMENT

3 ತಿಂಗಳೊಳಗೆ ಆರ್‌ಟಿಇ ಬಾಕಿ ಪಾವತಿಸಿ: ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 18:57 IST
Last Updated 14 ಸೆಪ್ಟೆಂಬರ್ 2020, 18:57 IST

ಬೆಂಗಳೂರು: ಖಾಸಗಿ ಶಾಲೆಗಳಿಗೆ ಪಾವತಿಸಬೇಕಾಗಿರುವ ಆರ್‌ಟಿಇ ಬಾಕಿ ಹಣವನ್ನು ಮೂರು ತಿಂಗಳೊಳಗೆ ಪಾವತಿಸಬೇಕು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.

ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಈ ಆದೇಶ ನೀಡಿದರು.2018–19, 2019–20 ಹಾಗೂ 2020–21ನೇ ಶೈಕ್ಷಣಿಕ ವರ್ಷದ ಆರ್‌ಟಿಇ ಶುಲ್ಕದ ಹಣವನ್ನು ಸರ್ಕಾರ ಪೂರ್ಣವಾಗಿ ಮರುಪಾವತಿಸಿಲ್ಲ ಎಂದು ಒಕ್ಕೂಟವು ಅರ್ಜಿಯಲ್ಲಿ ದೂರಿತ್ತು.

ಒಕ್ಕೂಟದ ವ್ಯಾಪ್ತಿಯಲ್ಲಿ 3,655 ಶಾಲೆಗಳಿವೆ. 55 ಸಾವಿರಕ್ಕೂ ಅಧಿಕ ಬೋಧಕ–ಬೋಧಕೇತರ ಸಿಬ್ಬಂದಿ ಇದ್ದು, 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಳೆದ ಏಪ್ರಿಲ್‌ ಮತ್ತು ಜೂನ್‌ ಅವಧಿಯಲ್ಲಿ ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರ, ಯಾವುದೇ ಶುಲ್ಕವನ್ನು ತುಂಬಬೇಡಿ ಎಂದು ಪೋಷಕರಿಗೆ ಹೇಳಿತ್ತು. ಯಾರೂ ಶುಲ್ಕ ತುಂಬದ ಕಾರಣ ಶಿಕ್ಷಕರಿಗೆ ವೇತನ ನೀಡಲು ಕಷ್ಟವಾಗಿದೆ. ಅಲ್ಲದೆ, ಸರ್ಕಾರವೂ ಆರ್‌ಟಿಇ ಹಣ ಮರು
ಪಾವತಿ ಮಾಡದಿರುವುದರಿಂದ ಖಾಸಗಿ ಶಾಲೆಗಳು ಸಂಕಷ್ಟದಲ್ಲಿವೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಚನೆ ನೀಡಬೇಕು’ ಎಂದು ಒಕ್ಕೂಟವು ಕೋರಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.