ADVERTISEMENT

‘ಮತ್ಸ್ಯಗಂಧ’ ರೈಲಿಗೆ ನವಿಲು ಡಿಕ್ಕಿ: ಗಾಜು ಒಡೆದು 1 ತಾಸು ರೈಲು ವಿಳಂಬ

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 19:31 IST
Last Updated 10 ಜೂನ್ 2023, 19:31 IST
ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಮತ್ಸ್ಯಗಂಧ ರೈಲಿಗೆ ಕುಂದಾಪುರ ತಾಲ್ಲೂಕಿನ ಇನ್ನಂಜೆ ಸಮೀಪ ನವಿಲು ಡಿಕ್ಕಿಯಾದ ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದಿರುವುದು
ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಮತ್ಸ್ಯಗಂಧ ರೈಲಿಗೆ ಕುಂದಾಪುರ ತಾಲ್ಲೂಕಿನ ಇನ್ನಂಜೆ ಸಮೀಪ ನವಿಲು ಡಿಕ್ಕಿಯಾದ ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದಿರುವುದು   

ಉಡುಪಿ: ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಮತ್ಸ್ಯಗಂಧ ರೈಲಿಗೆ ಶನಿವಾರ ಕುಂದಾಪುರ ತಾಲ್ಲೂಕಿನ ಇನ್ನಂಜೆ ಸಮೀಪ ನವಿಲು ಡಿಕ್ಕಿಯಾದ ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದು 1 ತಾಸು ರೈಲು ಸಂಚಾರ ಸ್ಥಗಿತವಾಗಿತ್ತು.

ಎಂಜಿನ್ ಮುಂಭಾಗದ ಗಾಜು ಒಡೆದಿದ್ದರಿಂದ ಪ್ರಯಾಣಿಕರು ಕೆಲಕಾಲ ಗಾಬರಿಯಾಗಿದ್ದರು.

‘ಗಾಜು ಒಡೆದಿದ್ದರಿಂದ ರಾತ್ರಿ ಹೊತ್ತು ಪ್ರಯಾಣಕ್ಕೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ನಿಜಾಮುದ್ದೀನ್–ಎರ್ನಾಕುಲಂ ರೈಲಿನ ಎಂಜಿನ್‌ ಬದಲಿಸಿಕೊಂಡು ಮತ್ಸ್ಯಗಂಧ ರೈಲು ಸಂಚಾರ ಮುಂದುವರಿಸಿತು’ ಎಂದು ಕೊಂಕಣ್ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಮಾಹಿತಿ ನೀಡಿದರು.

ADVERTISEMENT
ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಮತ್ಸ್ಯಗಂಧ ರೈಲಿಗೆ ಡಿಕ್ಕಿಯಾಗಿ ಮೃತಪಟ್ಟ ನವಿಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.