ADVERTISEMENT

ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾಂಗ್ರೆಸ್ ಅಂಗ ಸಂಸ್ಥೆಗಳು: ಬಿ.ವೈ. ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 15:48 IST
Last Updated 23 ಫೆಬ್ರುವರಿ 2021, 15:48 IST
ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ    

ಬೆಂಗಳೂರು: ‘ಕಾಂಗ್ರೆಸ್‌ನ ಅಂಗ ಸಂಸ್ಥೆಗಳೇ ಆಗಿರುವ ಪಿಎಫ್‌ಐ ಮತ್ತು ಎಸ್‌ಡಿಪಿಐಗಳಿಗೆ ಮುಕ್ತಿ ಹಾಡುವ ಕಾಲ ಶೀಘ್ರದಲ್ಲೇ ಬರಲಿದೆ’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

‘ಪಿಎಫ್‌ಐ ಮತ್ತು ಎಸ್‌ಡಿಪಿಐ ಬಿಜೆಪಿಯ ಬಿ ಟೀಂ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸರಣಿ ಟ್ವೀಟ್‌ಗಳ ಮೂಲಕ ವಿಜಯೇಂದ್ರ ಖಂಡಿಸಿದ್ದಾರೆ.

‘ಈ ಎರಡೂ ಸಂಘಟನೆಗಳ ಪೋಷಣೆ ಕಾಂಗ್ರೆಸ್‌ನ ಹೊಣೆ ಎಂಬಂತೆ ಅವುಗಳ ಮೇಲಿದ್ದ ಕ್ರಿಮಿನಲ್‌ ಕೇಸ್‌ಗಳನ್ನು ನಿಮ್ಮ ಅಧಿಕಾರದ ಅವಧಿಯಲ್ಲಿ ವಾಪಸ್‌ ಪಡೆದುಕೊಂಡಿರಿ. ಈ ಪಾಪದ ಕಾರ್ಯಕ್ಕೆ ರಾಜ್ಯದ ಜನತೆ ನಿಮಗೆ ತಕ್ಕ ಪಾಠ ಕಲಿಸಿದ್ದನ್ನು ನೀವು ಮರೆತಂತೆ ಕಾಣುತ್ತದೆ. ಎಲ್ಲವನ್ನೂ ರಾಜಕೀಯದ ಹಳದಿ ಕಣ್ಣಿನಿಂದ ನೋಡಬೇಡಿ’ ಎಂದು ಹೇಳಿದ್ದಾರೆ.

ADVERTISEMENT

ದೇಶ ದ್ರೋಹಿ, ಮತಾಂಧ ಉಗ್ರಗಾಮಿಗಳ ಹುಟ್ಟಡಗಿಸಿ, 370 ವಿಧಿ ರದ್ದು ಮಾಡಿ ಕಾಶ್ಮೀರವನ್ನು ರಕ್ಷಿಸಲಾಯಿತು. ಭಾರತದ ಸಾರ್ವಭೌಮತೆಯನ್ನು, ಬಲಿಷ್ಠತೆಯನ್ನು ಸಾರಿದ ಬಿಜೆಪಿ ಬದ್ಧತೆ, ಸಾಮರ್ಥ್ಯ ಏನೆಂಬುದು ಜನತೆಗೆ ತಿಳಿದಿದೆ. ನಿಮ್ಮ ಪಕ್ಷದ ಅಂಗಸಂಸ್ಥೆಗಳೇ ಆಗಿರುವ ಪಿಎಫ್‌ಐ ಮತ್ತು ಎಸ್‌ಡಿಪಿಐಗಳಿಗೆ ಮುಕ್ತಿ ಹಾಡುವ ಕಾಲ ಶೀಘ್ರದಲ್ಲೇ ಬರಲಿದೆ, ನೋಡುತ್ತಿರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.