ADVERTISEMENT

ಶಿವಮೊಗ್ಗ ನಾಗರಾಜ್‌ ಚಿತ್ರಕ್ಕೆ ಅಂತರರಾಷ್ಟ್ರೀಯ ಗೌರವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:15 IST
Last Updated 12 ಫೆಬ್ರುವರಿ 2019, 20:15 IST
ಪಶ್ಚಿಮ ಬಂಗಾಳದಲ್ಲಿ ಈಸ್ಟ್ ಮದ್ನಾಪುರ ಫೊಟೊಗ್ರಾಫಿಕ್ ಅಸೋಸಿಯೇಶನ್ ಆಯೋಜಿಸಿದ್ದ 7ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ಫೋಟೊ ಟ್ರಾವೆಲ್‌ ವಿಭಾಗದಲ್ಲಿ ‘ಎಫ್‌ಐಎಪಿ ರಿಬ್ಬನ್‌’ಗೌರವಕ್ಕೆ ಪಾತ್ರವಾದ ಸಿಂಚನ ಚಿತ್ರ.
ಪಶ್ಚಿಮ ಬಂಗಾಳದಲ್ಲಿ ಈಸ್ಟ್ ಮದ್ನಾಪುರ ಫೊಟೊಗ್ರಾಫಿಕ್ ಅಸೋಸಿಯೇಶನ್ ಆಯೋಜಿಸಿದ್ದ 7ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ಫೋಟೊ ಟ್ರಾವೆಲ್‌ ವಿಭಾಗದಲ್ಲಿ ‘ಎಫ್‌ಐಎಪಿ ರಿಬ್ಬನ್‌’ಗೌರವಕ್ಕೆ ಪಾತ್ರವಾದ ಸಿಂಚನ ಚಿತ್ರ.   

ಶಿವಮೊಗ್ಗ: ಪಶ್ಚಿಮ ಬಂಗಾಳದಲ್ಲಿಈಸ್ಟ್ ಮಿಡ್ನಾಪುರ ಫೊಟೊ ಗ್ರಾಫಿಕ್ ಅಸೋಸಿಯೇಶನ್ಆಯೋಜಿಸಿದ್ದ7ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ ಅವರ ಛಾಯಾಚಿತ್ರಗಳಿಗೆಎರಡು ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿವೆ.

ಪೋಟೊಜರ್ನಲಿಸಂ ವಿಭಾಗದಲ್ಲಿ ‘ಸರಂಡರ್‌’ ಶೀರ್ಷಿಕೆಯ ಚಿತ್ರ ‘ಛೇರ್ಮನ್ ಚಾಯ್ಸ್‌’ ಪ್ರಶಸ್ತಿಗೆ ಹಾಗೂ ಪೋಟೊಟ್ರಾವೆಲ್‌ ವಿಭಾಗದಲ್ಲಿ ‘ಸಿಂಚನ’ ಶೀರ್ಷಿಕೆಯ ಚಿತ್ರ ‘ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್‌ ಫೋಟೊಗ್ರಫಿ ರಿಬ್ಬನ್’ ಎನ್ನುವ ಗೌರವಕ್ಕೆ ಪಾತ್ರವಾಗಿದೆ.

ಪ್ರಕೃತಿ ವಿಭಾಗದ ಸ್ಪರ್ಧೆಯಲ್ಲೂ ಇವರ ನಾಲ್ಕು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಸ್ಪರ್ಧೆಯಲ್ಲಿ ಇಟಲಿ, ಇಂಗ್ಲೆಂಡ್‌, ಜರ್ಮನಿ, ಸಿಂಗಪುರ, ತೈವಾನ್, ಬ್ರೆಜಿಲ್‌, ಬೆಲ್ಜಿಯಂ, ಅಮೆರಿಕ ಸೇರಿದಂತೆ 46 ದೇಶಗಳ ಛಾಯಾಗ್ರಾಹಕರು ಸ್ಪರ್ಧಿಸಿದ್ದರು.

ADVERTISEMENT

ಜನವರಿಯಲ್ಲಿ ಈ‌ಸ್ಪರ್ಧೆ ನಡೆದಿತ್ತು. ಸ್ಪರ್ಧೆಯಲ್ಲಿ ವಿಜೇತ ಹಾಗೂ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನ ಫೆ.25ರಿಂದ 28ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.