ಶ್ರೀರಂಗಪಟ್ಟಣ: ಸೂರ್ಯನು ಬ್ರಹ್ಮ ಸ್ಥಾನದಿಂದ ಶಿವನ ಸ್ಥಾನಕ್ಕೆ ಅಲ್ಲಿಂದ ವಿಷ್ಣು ಸ್ಥಾನಕ್ಕೆ ಪ್ರವೇಶ ಮಾಡುವುದರಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗುವ ಸಂಭವ ಇದೆ ಎಂದು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದರು.
ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದಲ್ಲಿ ಮಕರ ಸಂಕ್ರಾಂತಿಯಂದು ಗುರುವಾರ ಸೂರ್ಯನು ಕಾಶಿ ಚಂದ್ರಮೌಳೇಶ್ವರ ಶಿವಲಿಂಗವನ್ನು ಸ್ಪರ್ಶಿಸಿದ ಘಳಿಗೆಯಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಇತರ ಕಡೆಯೂ ರಾಜಕೀಯ ಸ್ಥಿತ್ಯಂತರ ಆಗುವ ಸಾಧ್ಯತೆ ಇದೆ. ಹಾಲಿನಂತಹ ಮನಸ್ಸು ಒಡೆದಿದರೆ ಸರಿ ಹೋಗುವುದು ಕಷ್ಟ. ಶೀತಲ ಸಮರ ಮುಂದುವರೆಯಲಿದೆ ಎಂದು ಹೇಳಿದರು.
ಜಗತ್ತಿನಲ್ಲಿ ಈ ಬಾರಿಯೂ ಅತಿವೃಷ್ಟಿ ಉಂಟಾಗಲಿದೆ. ಯುದ್ದಗಳು ನಡೆಯಲಿವೆ. ಭಯೋತ್ಪಾದಕ ಕೃತ್ಯಗಳು ಘಟಿಸಲಿವೆ. ಆದರೆ ಅಷ್ಟಾಗಿ ವಿನಾಶ ಉಂಟಾಗುವುದಿಲ್ಲ. ಕಳೆದ ವರ್ಷ ನಾನು ಹೇಳಿದ್ದ ಭವಿಷ್ಯ ನಿಜವಾಗಿದೆ ಎಂದರು.ಗೋಪೂಜೆ ನೆರವೇರಿಸಿ ಭಕ್ತರಿಗೆ ಎಳ್ಳು ಬೆಲ್ಲ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.