ಪೋಪ್ ಫ್ರಾನ್ಸಿಸ್
ಬೆಂಗಳೂರು: ಪೋಪ್ ಫ್ರಾನ್ಸಿಸ್ ನಿಧನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಪೋಪ್ ಫ್ರಾನ್ಸಿಸ್ ನಿಧನದ ವಾರ್ತೆ ಕೇಳಿ ಅತ್ಯಂತ ದುಃಖಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
'ಪೋಪ್ ಫ್ರಾನ್ಸಿಸ್ ಅವರು ಶಾಂತಿ ಹಾಗೂ ಸಹಾನುಭೂತಿಯ ಸಂಕೇತ' ಎಂದು ಸಿಎಂ ಬಣ್ಣಿಸಿದ್ದಾರೆ.
'ಪೋಪ್ ಅವರ ಬದುಕು ಬಡವರ ಮೇಲಿನ ಪ್ರೀತಿ ಮತ್ತು ಜಗತ್ತಿಗೆ ಭರವಸೆಯ ಸಂದೇಶವಾಗಿತ್ತು. ಕರ್ನಾಟಕ ಹಾಗೂ ಜಗತ್ತಿನಾದ್ಯಂತದ ಕ್ರೈಸ್ತ ಸಮುದಾಯಕ್ಕೆ ನನ್ನ ಸಂತಾಪವನ್ನು ಸೂಚಿಸುತ್ತೇನೆ' ಎಂದು ಹೇಳಿದ್ದಾರೆ.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಇಂದು (ಸೋಮವಾರ) ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.