ADVERTISEMENT

Prajavani Eduverse: ಒಂದೇ ಸೂರಿನಡಿ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 14:40 IST
Last Updated 6 ಏಪ್ರಿಲ್ 2025, 14:40 IST
   

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್‌, ಸಿಇಟಿ ಫಲಿತಾಂಶದ ನಂತರ ಉತ್ತಮ ಕಾಲೇಜು ಆಯ್ಕೆ ಹೇಗೆ ಮಾಡಿಕೊಳ್ಳಬೇಕು? ಕೋರ್ಸ್‌ಗಳ ಆಯ್ಕೆ, ಪ್ರವೇಶ ಶುಲ್ಕ, ಶೈಕ್ಷಣಿಕ ಸಾಲ ಸೌಲಭ್ಯ, ಭವಿಷ್ಯದಲ್ಲಿನ ಉದ್ಯೋಗಾವಕಾಶಗಳ ಕುರಿತು ಸಮಗ್ರ ಮಾಹಿತಿ ನಿರೀಕ್ಷೆಯಲ್ಲಿದ್ದಾರಾ?

ದ್ವಿತೀಯ ಪಿಯು ಮುಗಿಸಿ, ನೀಟ್‌ ಹಾಗೂ ಸಿಇಟಿಗೆ ಬರೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೇ ಈ ಕುರಿತು ಹೆಚ್ಚು ಚಿಂತಿಸಬೇಡಿ. ಬೆಂಗಳೂರು ಅರಮನೆ ಮೈದಾನದಲ್ಲಿ (ತ್ರಿಪುರವಾಸಿನಿ) ಕರ್ನಾಟಕದ ವಿಶ್ವಾಸಾರ್ಹ ಪತ್ರಿಕೆಗಳಾದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ನಲ್ಲಿ ಈ ಎಲ್ಲ ಮಾಹಿತಿಯ ಕಣಜವೇ ದೊರಕಲಿದೆ. 60ಕ್ಕೂ ಹೆಚ್ಚು ಹೆಸರಾಂತ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ನೆಲೆಗೊಳ್ಳಲಿದ್ದು, ಸಮಗ್ರ ಮಾಹಿತಿ,  ಸಂಪೂರ್ಣ ಸಹಕಾರ, ಸಹಾಯಹಸ್ತ ಚಾಚುವ ಜತೆಗೆ, ವಿದ್ಯಾರ್ಥಿಗಳು, ಪೋಷಕರ ಎಲ್ಲ, ಅನುಮಾನ ಗೊಂದಲ ನಿವಾರಣೆ ಮಾಡಲಿವೆ. 

ಈ ಮೇಳದಲ್ಲಿ ಬೆಂಗಳೂರಿನ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಾದ ರಾಮಯ್ಯ ವಿಶ್ವವಿದ್ಯಾಲಯ, ಚಾಣಕ್ಯ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಪಿಇಎಸ್‌ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಸಪ್ತಗಿರಿ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಈಸ್ಟ್‌ ಪಾಯಿಂಟ್‌, ಸಿಎಂಆರ್‌ ವಿಶ್ವವಿದ್ಯಾಲಯ, ಈಸ್ಟ್‌–ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಎಂ.ಎಸ್‌. ಎಂಜಿನಿಯರಿಂಗ್‌ ಕಾಲೇಜು, ಸಂಭ್ರಮ್‌ ಇನ್‌ಸ್ಟಿಟ್ಯೂಷನ್ಸ್‌, ಅಮೃತ ವಿಶ್ವವಿದ್ಯಾಪೀಠಂ, ಯೂನಿವರ್ಸಲ್‌ ಶಿಕ್ಷಣ ಸಂಸ್ಥೆ, ರಾಜರಾಜೇಶ್ವರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಅಮಿಟಿ ವಿಶ್ವವಿದ್ಯಾಲಯ, ಏಟ್ರಿಯಾ, ಎಸಿಎಸ್‌ ಕಾಲೇಜು, ಡಾನ್‌ ಬಾಸ್ಕೊ, ಸಾಯಿ ವಿದ್ಯಾ ಸಂಸ್ಥೆ ಸೇರಿದಂತೆ ಹಲವು ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು ಭಾಗವಹಿಸುತ್ತಿವೆ. 

ADVERTISEMENT

ದ್ವಿತೀಯ ಪಿಯು ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ ಓದಿಗಷ್ಟೇ ಸೀಮಿತವಲ್ಲ, ಅದು ಭವಿಷ್ಯದ ಬದುಕಿನ ದಾರಿಯೂ ಆಗಿರುತ್ತದೆ. ಅಂತಹ ದಾರಿ ತೋರುವ ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ನರ್ಸಿಂಗ್, ಡಿಪ್ಲೊಮಾ, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌, ಡಿಜಿಟಲ್ ಮಾರ್ಕೆಟಿಂಗ್ ಎಂ.ಬಿ.ಎ, ಬಿ.ಎಸ್‌ಸಿ, ಬಿ.ಟೆಕ್‌, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಸಿಎ, ಫ್ಯಾಷನ್ ಡಿಸೈನ್..  ಹೀಗೆ ವಿವಿಧ ಕೋರ್ಸ್‌ಗಳು ಹಾಗೂ ಕಾಲೇಜುಗಳ ವಿಶೇಷತೆಗಳ ಬಗ್ಗೆ ಮಾಹಿತಿ ಒದಗಿಸಲಿವೆ.

ಆಯೋಜನೆ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’

ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು

ದಿನಾಂಕ: ಏಪ್ರಿಲ್‌ 12–13 ಸಮಯ: ಬೆಳಿಗ್ಗೆ 10ರಿಂದ 

ಪ್ರವೇಶ ನೋಂದಣಿಗಾಗಿ ಉಪಯೋಗಿಸಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.