ADVERTISEMENT

ಶೇರಿಭಿಕನಳ್ಳಿ: ಕಾರಜೋಳ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 19:31 IST
Last Updated 14 ಜೂನ್ 2020, 19:31 IST
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ   
""

ಕಲಬುರ್ಗಿ: ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ‘ಲೈಫ್‌ಡೌನ್ ಕಥೆಗಳು’ ಸರಣಿಯ ‘ಕಾಡು ಕೂಸುಗಳ ಕೂಗು’ (ಶೇರಿಭಿಕನಳ್ಳಿ ತಾಂಡಾ–ಕಲಬುರ್ಗಿ ಜಿಲ್ಲೆ) ಮೊದಲ ಲೇಖನಕ್ಕೆ ರಾಜ್ಯ ಸರ್ಕಾರ ತಕ್ಷಣ‌ ಸ್ಪಂದಿಸಿದೆ.

ಭಾನುವಾರ ಬೆಳಿಗ್ಗೆ ಪತ್ರಿಕೆ ಓದಿದ ತಕ್ಷಣ, ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪ್ರಜಾವಾಣಿ ಪ್ರತಿನಿಧಿಗೆ ಕರೆ ಮಾಡಿ ಶೇರಿಭಿಕನಳ್ಳಿ ತಾಂಡಾದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು.

‘ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿ ವರದಿ ತರಿಸಿಕೊಳ್ಳುತ್ತೇನೆ. ಅಲ್ಲಿನ ಜನರು ಸ್ಥಳಾಂತರಕ್ಕೆ ‌ಸಿದ್ಧ ಇದ್ದರೆ, ಅವರಿಗೆ ಪುನರ್ವಸತಿ ‌ಕಲ್ಪಿಸಿ ಇಲಾಖೆಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ನಮ್ಮ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ’ಎಂದರು.

ADVERTISEMENT

‘ರಾಜ್ಯದ ಇತರ ಕಡೆಯೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ವಾಸವಿರುವ ಬುಡಕಟ್ಟು ಜನರು ಸ್ಥಳಾಂತರಕ್ಕೆ ಸಿದ್ಧ ಇದ್ದರೆ, ಅವರಿಗೆ ಪುನರ್ವಸತಿ ಕಲ್ಪಿಸಲು ಬದ್ಧ. ಆದರೆ, ಬಹುತೇಕ ಕಡೆ ಅವರು ಅಲ್ಲಿಂದ ಬೇರೆಡೆ ಸ್ಥಳಾಂತರಗೊಳ್ಳಲು ಸಿದ್ಧರಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.