ADVERTISEMENT

ನೆಟ್ಟಾರು ಹತ್ಯೆ: ಐವರು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 22:14 IST
Last Updated 18 ಆಗಸ್ಟ್ 2022, 22:14 IST
   

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯ ಇದೇ 23ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಪ್ರಕರಣದ ದಾಖಲೆಗಳು ಮಂಗಳೂರು ಕೋರ್ಟ್‌ನಿಂದ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಇದೇ 17ರಂದು ವರ್ಗಾವಣೆಯಾಗಿದ್ದು, ಗುರುವಾರ ನ್ಯಾಯಾಧೀಶ ಸಿ.ಎಂ.ಗಂಗಾಧರ ವಿಚಾರಣೆ ನಡೆಸಿದರು. ಈ ವೇಳೆ ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್, ’ಆರೋಪಿಗಳನ್ನು ಹೆಚ್ಚಿನ ಪೊಲೀಸ್‌ ತನಿಖೆಗೆ ಒಳಪಡಿಸಬೇಕಾಗಿದ್ದು ಯುಎಪಿ ಕಾಯ್ದೆ–1967ರ ಕಲಂ 43–ಡಿ ಅಡಿಯಲ್ಲಿ ವಶಕ್ಕೆ ನೀಡಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಆರೋಪಿಗಳಾದ ತಂಬಿನ ಮಕ್ಕಿಯ ನೌಫಾಲ್‌, ನಾವೂರಿನ ಸೈನುಲ್‌ ಅಬಿದ್‌, ನಾವೂರಿನ ಮೊಹ ಮದ್‌ ಶಿಯಾಬ್‌, ಎಲಿಮಲೆಯ ಅಬ್ದುಲ್ ಬಷೀರ್, ಅಂಕತಡ್ಕದ ರಿಯಾಜ್‌ ಅವರನ್ನು ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿತು.

ADVERTISEMENT

ಜುಲೈ 26ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.