ADVERTISEMENT

ಪೂರ್ವ ಪ್ರಾಥಮಿಕ: ಶಿಕ್ಷಕರ ಪಿಂಚಣಿ ಹೆಚ್ಚಳ; ಶಾಲಾ ಶಿಕ್ಷಣ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:56 IST
Last Updated 12 ಜೂನ್ 2025, 15:56 IST
<div class="paragraphs"><p>ಪಿಂಚಣಿ</p></div>

ಪಿಂಚಣಿ

   

ಐ ಸ್ಟಾಕ್‌ ಚಿತ್ರ

ಬೆಂಗಳೂರು: ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯರು ಮತ್ತು ಸಹಾಯಕಿಯರ ನಿವೃತ್ತಿ ಪಿಂಚಣಿಯನ್ನು ಪರಿಷ್ಕರಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 

ADVERTISEMENT

ಶಿಕ್ಷಕಿಯರ ಪ್ರತಿ ತಿಂಗಳ ಪಿಂಚಣಿಯನ್ನು ₹19,000 ಹಾಗೂ ಸಹಾಯಕಿಯರ ಪಿಂಚಣಿಯನ್ನು ₹15,000ಕ್ಕೆ ನಿಗದಿ ಮಾಡಲಾಗಿದೆ. ಇದುವರೆಗೂ ಅವರು ಕ್ರಮವಾಗಿ ₹11,500 ಹಾಗೂ ₹ 9,000 ಪಡೆಯುತ್ತಿದ್ದರು. ಈ ಸೌಲಭ್ಯ ಏಪ್ರಿಲ್‌ 1984ರ ಪೂರ್ವದಲ್ಲಿ ಅನುದಾನಕ್ಕೆ ಒಳಪಟ್ಟಿರುವ ಸಂಸ್ಥೆಗಳಲ್ಲಿ ಕೆಲಸ ಮಾಡಿ, ನಿವೃತ್ತರಾದ ನೌಕರರಿಗೆ ಅನ್ವಯವಾಗುತ್ತದೆ ಎಂದು ಇಲಾಖೆ ಹೇಳಿದೆ.

ಕರ್ನಾಟಕ ರಾಜ್ಯ ಸರ್ಕಾರಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಸಿಬ್ಬಂದಿ ಸಂಘ 2018ರಲ್ಲಿ ನಿಗದಿ ಮಾಡಿದ ಹಳೇ ಪಿಂಚಣಿಯನ್ನು ಪರಿಷ್ಕರಣೆ ಮಾಡುವಂತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.