ADVERTISEMENT

ನಿವೃತ್ತಿ ವಯಸ್ಸು ಕುರಿತ ವದಂತಿ ಅಲ್ಲಗಳೆದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 16:47 IST
Last Updated 28 ಜನವರಿ 2021, 16:47 IST
ಸಿ.ಎಸ್.ಷಡಾಕ್ಷರಿ
ಸಿ.ಎಸ್.ಷಡಾಕ್ಷರಿ   

ಬೆಂಗಳೂರು: 'ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ 33 ವರ್ಷಗಳ ಕರ್ತವ್ಯ ಅಥವಾ 60 ವರ್ಷ ಯಾವುದು ಮೊದಲೊ ಅದನ್ನು ಪರಿಗಣಿಸುವ ಯಾವುದೇ ಪ್ರಸ್ತಾವ ಸರ್ಕಾರ ಅಥವಾ ಸಂಘದ ಮುಂದೆ ಇಲ್ಲ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಸ್ಪಷ್ಟಪಡಿಸಿದ್ದಾರೆ.

‘ಈ ಬಗ್ಗೆ ವದಂತಿಗಳು ಹಬ್ಬಿರುವುದು ಗಮನಕ್ಕೆ ಬಂದಿದೆ. ನೌಕರರಲ್ಲಿ ಅನಗತ್ಯ ಗೊಂದಲವಿದೆ. ಸರ್ಕಾರಿ ನೌಕರರ ಹಕ್ಕು ಬಾಧ್ಯತೆ ರಕ್ಷಣೆಗೆ ಸಂಘ ಬದ್ಧವಾಗಿದೆ. ನಿವೃತ್ತಿ ವಯಸ್ಸಿನ ಬಗ್ಗೆ ಉಂಟಾಗಿರುವ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ’ ಎಂದೂ ನೌಕರರಲ್ಲಿ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT