ADVERTISEMENT

ಖಾಸಗಿ ಪದವಿಪೂರ್ವ ಕಾಲೇಜು ಆರಂಭ: ಕಾಲಾವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:04 IST
Last Updated 14 ಮಾರ್ಚ್ 2019, 20:04 IST
   

ಬೆಂಗಳೂರು: 2019–20 ನೇ ಸಾಲಿನಲ್ಲಿ ಖಾಸಗಿ ಪದವಿಪೂರ್ವ ಕಾಲೇಜು ಆರಂಭಿಸಲು ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ವಿಸ್ತರಿಸಲಾಗಿದ್ದು, ಕಾಲೇಜುಗಳ ತಪಾಸಣೆಗೆ ಸಮಿತಿಗಳ ಸಂಖ್ಯೆ ಹೆಚ್ಚಿಸಲು ಸೂಚಿಸಲಾಗಿದೆ.

ಖಾಸಗಿ ಅರ್ಹ ಶಿಕ್ಷಣ ಸಂಸ್ಥೆಗಳು, ಟ್ರಸ್ಟ್‌ಗಳು ಇದೇ 21 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಲ್ಲದೆ, ನಿಯಮಗಳ ಅನುಸಾರ ಅರ್ಹತೆ ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ತಪಾಸಣಾ ಸಮಿತಿಗಳನ್ನು ರಚಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಜಿಲ್ಲಾ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.

ಸಮಿತಿಗೆ ಆಯಾ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಿರಿಯ ಪ್ರಿನ್ಸಿಪಾಲರಾಗಿರುವ ಒಬ್ಬರನ್ನು ಸಮಿತಿ ಅಧ್ಯಕ್ಷರೆಂದು ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಹಿರಿಯ ಅನುಮೋದಿತ ಪೂರ್ಣಕಾಲಿಕ ಪ್ರಿನ್ಸಿಪಾಲರಾಗಿರುವ ಒಬ್ಬರನ್ನು ಸದಸ್ಯರೆಂದು ನಾಮಕಾರಣ ಮಾಡಬೇಕು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.