ADVERTISEMENT

ನೇಮಕಾತಿ ವಿಭಾಗವೇ ‘ಅಕ್ರಮ’ದ ಕೇಂದ್ರ

ವಿಚಾರಣೆ ವೇಳೆ ಮಾಹಿತಿ ನೀಡಿದ ಡಿವೈಎಸ್ಪಿ ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 13 ಮೇ 2022, 21:06 IST
Last Updated 13 ಮೇ 2022, 21:06 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಪೊಲೀಸ್ ನೇಮಕಾತಿ ವಿಭಾಗವೇ ಕೇಂದ್ರವಾಗಿದ್ದ ಸಂಗತಿ ಸಿಐಡಿ ತನಿಖೆಯಿಂದ ಹೊರಬಿದ್ದಿದ್ದು, ಇದೀಗ ಬಂಧಿಸಿರುವ ಡಿವೈಎಸ್ಪಿ ಶಾಂತಕುಮಾರ್ ಸಹ ಹಲವು ಮಾಹಿತಿ ಬಾಯ್ಬಿಟ್ಟಿದ್ದಾರೆ.

‘ಡಿವೈಎಸ್ಪಿ ಸೇರಿದಂತೆ ನೇಮಕಾತಿ ವಿಭಾಗದ ಐವರನ್ನು ಈಗಾಗಲೇ ಬಂಧಿಸಲಾಗಿದೆ. ಪಿಎಸ್‌ಐ ನೇಮಕಾತಿ ಬಯಸಿ ಅರ್ಜಿ ಸಲ್ಲಿಸುವುದರಿಂದ ಹಿಡಿದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗುವವರೆಗೂ ಅಕ್ರಮ ನಡೆದಿರುವ ಮಾಹಿತಿ ಇದೆ. ಈ ಬಗ್ಗೆ ಮತ್ತಷ್ಟು ಪುರಾವೆ ಸಂಗ್ರಹಿಸಬೇಕಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಅಕ್ರಮವಾಗಿ ಆಯ್ಕೆ ಆಗಲು ಹಣ ನೀಡಿದ್ದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಗಳನ್ನೇ ಬದಲಿಸಲಾ
ಗಿದೆ. ಲಿಖಿತ ಪರೀಕ್ಷೆ ವೇಳೆ ಅಭ್ಯರ್ಥಿಗಳು ಖಾಲಿ ಬಿಟ್ಟಿದ್ದ ಒಎಂಆರ್ ಪ್ರತಿಯನ್ನು, ನೇಮಕಾತಿ ವಿಭಾಗದಲ್ಲೇ ಭರ್ತಿ ಮಾಡ
ಲಾಗಿದೆ. ಜೊತೆಗೆ, ಕೆಲ ಒಎಂಆರ್ ಪ್ರತಿಗಳನ್ನು ಹೊರಗೆ ಕೊಟ್ಟು ತಿದ್ದಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದ ಬಗ್ಗೆಯೂ ಸಂಶಯವಿದ್ದು, ಆ ಆಯಾಮದಲ್ಲೂ ತನಿಖೆ ಮುಂದುವರಿದಿದೆ’ ಎಂದೂ ಹೇಳಿವೆ.

ಡಿವೈಎಸ್ಪಿ ಹಿಡಿತದಲ್ಲಿ ವಿಭಾಗ: ‘ ತಂತ್ರಜ್ಞಾನದಲ್ಲಿ ಪರಿಣಿತನಾಗಿದ್ದ ಡಿವೈಎಸ್ಪಿ ಶಾಂತಕುಮಾರ್, ವಿಭಾಗದ ಹಿರಿಯರಿಂದ ಕಿರಿಯರವರೆಗೂ ಹಿಡಿತದಲ್ಲಿ ಇಟ್ಟುಕೊಂಡಿದ್ದ. ಆತ ಹೇಳಿದ ರೀತಿಯಲ್ಲೇ ಎಲ್ಲರೂ ಕೆಲಸ ಮಾಡುತ್ತಿದ್ದರು. ಜೊತೆಗೆ, ತನಗೆ ಬೇಕಾದವರನ್ನು ಆತ ನಿಯೋಜನೆ ಮೇರೆಗೆ ವಿಭಾಗಕ್ಕೆ ಕರೆಸಿಕೊಳ್ಳುತ್ತಿದ್ದ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ವಿಭಾಗದ ತಂತ್ರಜ್ಞಾನ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಕಂಪನಿಗೆ ವಹಿಸಲಾಗಿತ್ತು. ಕಂಪನಿ ಪ್ರತಿನಿಧಿಗಳು ಸಹ ಶಾಂತಕುಮಾರ್ ಹೇಳಿದಂತೆ ಕೇಳುತ್ತಿದ್ದರು. ಅಕ್ರಮದಲ್ಲಿ ಅವರೂ ಭಾಗಿಯಾಗಿರುವ ಮಾಹಿತಿ ಇದ್ದು, ಪರಿಶೀಲಿಸಲಾಗುತ್ತಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.