ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದವರ ಪೈಕಿ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ತೆರವು ಮಾಡಲಾಗಿದೆ.
ಡಿವೈಎಸ್‌ಪಿಯಾಗಿದ್ದ ಶಾಂತಕುಮಾರ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ದ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ತೆರವು ಮಾಡಿ, ಗೃಹ ಇಲಾಖೆ ಜೂನ್ 13ರಂದು ಆದೇಶ ಹೊರಡಿಸಿದೆ.
ಮಲ್ಲಿಕಾರ್ಜುನ ಸಾಲಿ (ಡಿವೈಎಸ್‌ಪಿ) ಶಾಂತಕುಮಾರ್ (ಡಿವೈಎಸ್‌ಪಿ, ಸಶಸ್ತ್ರ), ವೈಜ್ಯನಾಥ ಕಲ್ಯಾಣಿ ರೇವೂರ (ಸಹಾಯಕ ಕಮಾಂಡೆಂಟ್), ಆನಂದ ಮೇತ್ರಿ (ಇನ್‌ಸ್ಪೆಕ್ಟರ್) ಅವರ ಅಮಾನತು ಆದೇಶ ತೆರವು ಮಾಡಲಾಗಿದೆ.
ನಾಲ್ವರನ್ನು ಐಎಸ್‌ಡಿ, ಪಿಟಿಎಸ್, ಕೆಎಸ್‌ಆರ್‌ಪಿಯ ಏಳನೇ ಪಡೆ ಹಾಗೂ ಎಫ್‌ಪಿಬಿಗೆ ವರ್ಗಾವಣೆ ಮಾಡಲಾಗಿದೆ.
ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಹಿಂದಿನ ಬಿಜೆಪಿ ಸರ್ಕಾರವು ಸಿಐಡಿಗೆ ವಹಿಸಿತ್ತು. ಮಲ್ಲಿಕಾರ್ಜುನ ಸಾಲಿ, ಶಾಂತಕುಮಾರ್, ವೈಜ್ಯನಾಥ ಕಲ್ಯಾಣಿ ರೇವೂರ ಹಾಗೂ ಆನಂದ ಮೇತ್ರಿ ಕರ್ತವ್ಯ ಲೋಪ ಎಸಗಿದ್ದು, ಸಾಬೀತಾಗಿತ್ತು. ಅವರನ್ನು ಹಿಂದಿನ ಸರ್ಕಾರ ಕೆಲಸದಿಂದ ಅಮಾನತು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.