ADVERTISEMENT

ಪಿಯುಸಿ: ಕರಡು ಪ್ರವೇಶಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 20:56 IST
Last Updated 27 ಡಿಸೆಂಬರ್ 2019, 20:56 IST
   

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಹೊಸ ವಿದ್ಯಾರ್ಥಿಗಳ ಕರಡು ಪ್ರವೇಶಪತ್ರಗಳನ್ನು ಶುಕ್ರವಾರ ಆನ್‌ಲೈನ್‌ ಪೋರ್ಟಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

‘ಕರಡು ಪ್ರವೇಶಪತ್ರವನ್ನು ಪ್ರತಿಯೊಬ್ಬ ಪ್ರಾಂಶುಪಾಲರೂ ಡೌನ್‌ಲೋಡ್‌ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ವಿತರಿಸಿ, ಎಲ್ಲವೂ ಸರಿ ಇದೆ ಎಂದು ಖಚಿತಪಡಿಸಿಕೊಂಡು ವಿದ್ಯಾರ್ಥಿಯಿಂದ ಸಹಿ ಪಡೆಯಬೇಕು. ಸರಿಯಿರುವ ಪ್ರವೇಶಪತ್ರವನ್ನು ಕಾಲೇಜಿನಲ್ಲೇ ಸುರಕ್ಷಿತವಾಗಿ ಇಡಬೇಕು. ವ್ಯತ್ಯಾಸ ಅಥವಾ ನ್ಯೂನತೆಗಳಿದ್ದಲ್ಲಿ ಜನವರಿ 6ರೊಳಗೆ ಕೇಂದ್ರ ಕಚೇರಿಯ ಗಣಕ ವಿಭಾಗಕ್ಕೆ ದಾಖಲೆಪತ್ರಗಳನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬೇಕು’ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಏನೆಲ್ಲ ಬದಲಾವಣೆ ಇರಬಹುದು?: ವಿದ್ಯಾರ್ಥಿಯಹೆಸರು, ತಂದೆಯ ಹೆಸರು, ತಾಯಿಯ ಹೆಸರು, ವಿದ್ಯಾರ್ಥಿಯ ಫೋಟೊ, ಭಾಗ 1, ಭಾಗ 2 ಪಠ್ಯ ವಿಷಯ, ಮಾಧ್ಯಮ, ಸಂಯೋಜನೆ ಅಥವಾ ಇತರ ಯಾವುದೇ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.