ADVERTISEMENT

ಮೈಸೂರು ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆ ಖಚಿತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 6:05 IST
Last Updated 17 ನವೆಂಬರ್ 2018, 6:05 IST
   

ಮೈಸೂರು:ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್‌ ಅವರು ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಆಗುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಪುಷ್ಪಲತಾ ಶನಿವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು. ಉಪಮೇಯರ್‌ ಆಗಿ ಜೆಡಿಎಸ್‌ನ ಶಫೀ ಅಹಮದ್ ನಾಮಪತ್ರ ಸಲ್ಲಿಸಿದರು.

65 ಸದಸ್ಯಬಲದ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟು 37 ಸ್ಥಾನಗಳನ್ನು ಹೊಂದಿವೆ. ಬಿಜೆಪಿ 22ಸ್ಥಾನಗಳನ್ನು ಹೊಂದಿದೆ.

ADVERTISEMENT

**

ಸಿದ್ದರಾಮಯ್ಯ ಅವರ ಹಠ ಗೆದ್ದಿದೆ...

ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಹಠ ಗೆದ್ದಿದೆ.ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಅಧಿಕಾರವಿರಲಿಲ್ಲ. ಆದರೆ,ಮೈತ್ರಿ ಸರ್ಕಾರದಿಂದ ಈಗ ಮೇಯರ್‌ ಅಧಿಕಾರ ಸಿಕ್ಕಿದೆ.

ನಾನು ಈಗಾಗಲೇ ಉಪ ಮೇಯರ್‌ ಆಗಿ ಕೂಡ ಕೆಲಸ ಮಾಡಿದ್ದೇನೆ.ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ಕಾಂಗ್ರೆಸ್‌,ಜೆಡಿಎಸ್‌ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ.ಸ್ವಚ್ಛತೆಗೆಮೊದಲ ಆದ್ಯತೆ ನೀಡುತ್ತೇನೆ.

–ಪುಷ್ಪಲತಾ ಜಗನ್ನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.