ADVERTISEMENT

ಕ್ವಿಜ್‌: ಪ್ರಶಸ್ತಿಗಾಗಿ ಇಂದು ಬೌದ್ಧಿಕ ಕಸರತ್ತು

ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಂದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 19:29 IST
Last Updated 29 ಜನವರಿ 2020, 19:29 IST
ಪ್ರಜಾವಾಣಿ ಕ್ವಿಜ್‌ ಲೋಗೊ
ಪ್ರಜಾವಾಣಿ ಕ್ವಿಜ್‌ ಲೋಗೊ   

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ 6ನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಅಂತಿಮ ಸುತ್ತಿನ ಸ್ಪರ್ಧೆ ನಗರದ ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆಯಲಿದೆ.

ಬೆಂಗಳೂರು ವಲಯದ (ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳು) ಅರ್ಹತಾ ಸುತ್ತಿನ ಸ್ಪರ್ಧೆಗಳು ಬೆಳಿಗ್ಗೆ 9.30ರಿಂದ ನಡೆಯಲಿದ್ದರೆ, ಮಧ್ಯಾಹ್ನ 2.30ರಿಂದ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.

ಬೆಳಿಗ್ಗೆ8.30ರಿಂದ ನೋಂದಣಿ ಆರಂಭವಾಗುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್‌) ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ) ಡಾ.ಸುರೇಶ್‌ ಬಿ.ಪಿ. ಪಾಲ್ಗೊಳ್ಳುವರು.

ADVERTISEMENT

12.30ರಿಂದ ಬೆಂಗಳೂರು ವಲಯ ಮಟ್ಟದ ಕ್ವಿಜ್‌ ಚಾಂಪಿಯನ್‌ಷಿಪ್‌ನ ಅಂತಿಮ ಹಣಾಹಣಿ ನಡೆಯಲಿದ್ದು, ದೀಕ್ಷಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಧರ್‌, ಬಿಬಿಎಂಪಿಯ ವಿಶೇಷ ಆಯುಕ್ತ (ಯೋಜನೆಗಳು) ರವಿಕುಮಾರ್ ಸುರಪುರ್‌,ಬಿಡದಿಯ ಶಿವದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್‌ನ ಮಾಲೀಕ ಬಿ.ಸಿ.ಶಶಿಕುಮಾರ್‌ ಪಾಲ್ಗೊಂಡುವಲಯ ಮಟ್ಟದ ವಿಜೇತರಿಗೆ ಬಹುಮಾನ ವಿತರಿಸುವರು.

ಬೆಂಗಳೂರು ವಲಯದಿಂದ ಆಯ್ಕೆಯಾದತಂಡ ಸೇರಿದಂತೆ ಒಟ್ಟು 12 ತಂಡಗಳನ್ನು ಒಳಗೊಂಡ ಕ್ವಿಜ್‌ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿನ ಸ್ಪರ್ಧೆಗಳು ಮಧ್ಯಾಹ್ನ 2.30ರಿಂದ ಆರಂಭವಾಗಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್‌ ವಿಜೇತರಿಗೆಬಹುಮಾನ ವಿತರಿಸುವರು. ವಿಜೇತ ತಂಡಕ್ಕೆ ₹50 ಸಾವಿರ ನಗದು ಬಹುಮಾನ ಇದೆ. 2ನೇ ಬಹುಮಾನ ₹30 ಸಾವಿರ, 3ನೇ ಬಹುಮಾನ ₹10 ಸಾವಿರ, 4ನೇ ಬಹುಮಾನ ₹6 ಸಾವಿರ, 5ನೇ ಬಹುಮಾನ ₹4 ಸಾವಿರ ನೀಡಲಾಗುವುದು.

ವಿದ್ಯಾರ್ಥಿಗಳಿಗೆ ಊಟ ಹಾಗೂ ಉಪಾಹಾರದ ವ್ಯವಸ್ಥೆಯನ್ನು ಬಿಡದಿಯ ಶಿವ ದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್‌ ಹಾಗೂ ಬೆಂಗಳೂರು ಹಾಲು ಒಕ್ಕೂಟದವರು ಮಾಡಲಿದ್ದಾರೆ.

ಮಾಹಿತಿಗೆ 9606912242, 9742284543 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.