ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ಮಳೆ, ಪ್ರವಾಹ ಇಳಿಮುಖ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 9:34 IST
Last Updated 12 ಆಗಸ್ಟ್ 2019, 9:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಮಳೆಯ ಅಬ್ಬರ ಸೋಮವಾರ ಬಹುತೇಕ ತಗ್ಗಿದೆ. ಬೆಳಗಾವಿ, ಚಿಕ್ಕೋಡಿ, ಖಾನಾಪುರ, ಬೈಲಹೊಂಗಲ ಸೇರಿದಂತೆ ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಮಳೆಯ ರಭಸ ಕಡಿಮೆಯಾಗಿದೆ.

ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಹರಿವು ಇಳಿಮುಖವಾಗಿದ್ದು, ಪ್ರವಾಹ ಕಡಿಮೆಯಾಗುತ್ತಿದೆ. ಮಲಪ್ರಭಾ ಜಲಾಶಯದ ಒಳಹರಿವು 15,000 ಕ್ಯುಸೆಕ್‌ಗೆ ಇಳಿದಿದೆ. ಇದೇ ರೀತಿ ಹೊರಹರಿವು 11,164 ಕ್ಯುಸೆಕ್‌ಗೆ ಇಳಿದಿದೆ.

ಹಿಡಕಲ್‌ ಜಲಾಶಯಕ್ಕೆ 47,823 ಕ್ಯುಸೆಕ್‌ ಒಳಹರಿವು ಇದ್ದು, ಹೊರಹರಿವು 38,646 ಕ್ಯುಸೆಕ್‌ಗೆ ಇಳಿದಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೊರಬರುತ್ತಿರುವ ನೀರಿನ ಪ್ರಮಾಣವು 48,893 ಕ್ಯುಸೆಕ್‌ಗೆ ಇಳಿದಿದೆ. ಇದೇ ರೀತಿ ಅಲ್ಲಿನ ವಿವಿಧ ಜಲಾಶಯಗಳ ಮೂಲಕ ರಾಜಾಪುರ ಬ್ಯಾರೇಜ್‌ ಮೂಲಕ 3,21,400 ಕ್ಯುಸೆಕ್‌ ನೀರು ಕೃಷ್ಣಾಗೆ ಹರಿದುಬರುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.