ADVERTISEMENT

ಮಳೆ ಬಿಡುವು: ಪ್ರವಾಹದಿಂದ 13 ಹಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 19:30 IST
Last Updated 25 ಜುಲೈ 2021, 19:30 IST
ಹರಪನಹಳ್ಳಿಯ ಗೋಕರ್ಣೇಶ್ವರ ದೇವಸ್ಥಾನದ ಆವರಣದಲ್ಲಿದ್ದ ಅರಳಿಮರ ಬುಡಸಮೇತ ಬಿದ್ದಿರುವುದು.
ಹರಪನಹಳ್ಳಿಯ ಗೋಕರ್ಣೇಶ್ವರ ದೇವಸ್ಥಾನದ ಆವರಣದಲ್ಲಿದ್ದ ಅರಳಿಮರ ಬುಡಸಮೇತ ಬಿದ್ದಿರುವುದು.   

ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಮಳೆ ಪ್ರಮಾಣ ತಗ್ಗಿದ್ದು, ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಶನಿವಾರ40.1 ಸೆಂ.ಮೀ. ಮಳೆ ಸುರಿದು ದಾಖಲೆ ಬರೆದಿದ್ದ ಚಕ್ರ ಜಲಾಶಯ ಪ್ರದೇಶದಲ್ಲಿ ಭಾನುವಾರ 7.20 ಸೆಂ.ಮೀ. ಮಳೆ ದಾಖಲಾಗಿದೆ.

ಶನಿವಾರ ಲಿಂಗನಮಕ್ಕಿ ಜಲಾಶಯಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿದುಬಂದಿತ್ತು. ಈಗಾಗಲೇ ಭರ್ತಿಯಾಗಿ ಹರಿಯುತ್ತಿರುವ ತುಂಗಾ ನದಿಗೆ 65 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 72 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಹಸುಗಳ ಸಾವು: ಆನಂದಪುರ ಸಮೀಪದ ಬೈರಾಪುರದಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿ ಮೇಯಲು ಹೋದ 13 ಹಸುಗಳು ಸಾವನ್ನಪ್ಪಿವೆ. ಗೌರಿಹಳ್ಳ ತುಂಬಿ ಹರಿದು ಪ್ರವಾಹ ಉಂಟಾದ ಪರಿಣಾಮ 30 ಹಸುಗಳು ಸಿಲುಕಿದ್ದವು.

ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಮಳೆಯಿಂದಾಗಿ 59 ಮನೆಗಳಿಗೆ ಹಾನಿಯಾಗಿದ್ದು, ₹27.85 ಲಕ್ಷದ ಆಸ್ತಿ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.