ADVERTISEMENT

ನನ್ನ ರಾಜ್ಯೋತ್ಸವದಂದು ಕನ್ನಡ ಮಕ್ಕಳಿಗೆ ಶುಭಾಶಯಗಳು: ರಜನಿಕಾಂತ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 9:43 IST
Last Updated 2 ನವೆಂಬರ್ 2022, 9:43 IST
ರಜನಿಕಾಂತ್ ಹಾಗೂ ಶಿವರಾಜ್‌ಕುಮಾರ್
ರಜನಿಕಾಂತ್ ಹಾಗೂ ಶಿವರಾಜ್‌ಕುಮಾರ್   

ಬೆಂಗಳೂರು: ನನ್ನ ರಾಜ್ಯೋತ್ಸವದಂದು ಕನ್ನಡ ಮಕ್ಕಳಿಗೆ ಶುಭಾಶಯಗಳು...

ಹೀಗೆಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು 67 ನೇ ರಾಜ್ಯೋತ್ಸವದಂದುಕನ್ನಡಿಗರಿಗೆ ವಿಧಾನಸೌಧದ ಮುಂದೆ ನಿಂತು ಶುಭ ಕೋರಿದರು.ಅವರು ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಜನಿಕಾಂತ್ ಅವರು ಮಳೆಯಲ್ಲಿಯೇ ಮಾತನಾಡಿದರು.

ADVERTISEMENT

ಅಪ್ಪು ದೇವರ ಮಗು: ರಜನಿಕಾಂತ್

‘ಡಾ.ರಾಜ್‌ಕುಮಾರ್‌ ಸೇರಿದಂತೆ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಉಳಿದ ಎಲ್ಲರೂ 70 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ನಮ್ಮ ಪ್ರೀತಿಯ ಪುನೀತ್‌ ರಾಜ್‌ಕುಮಾರ್‌ 21 ವರ್ಷಗಳಲ್ಲೇ ಮಾಡಿ ಹೋಗಿದ್ದಾನೆ’ ಎಂದು ನಟ ರಜನಿಕಾಂತ್‌ ಹೇಳಿದರು.

ಕನ್ನಡದಲ್ಲೇ ಮಾತನಾಡಿದ ಅವರು, ‘ಮಾರ್ಕಂಡೇಯ, ಪ್ರಹ್ಲಾದ, ನಚಿಕೇತ ನಂತೆ ಕಲಿಯುಗದಲ್ಲಿ ಈ ಅಪ್ಪು. ಅವನು ದೇವರ ಒಬ್ಬ ಮಗು. ಸ್ವಲ್ಪ ದಿನ ಇಲ್ಲಿಗೆ ಬಂದು ನಮ್ಮ ಜತೆ ಇದ್ದು ಆಟವಾಡಿ, ತನ್ನಲ್ಲಿ ಇರುವುದನ್ನೆಲ್ಲ ತೋರಿಸಿ ದೇವರ ಹತ್ತಿರ ಹೋಗಿದ್ದಾನೆ. ಅವನ ಆತ್ಮ ಇಲ್ಲೇ ನಮ್ಮ ಸುತ್ತವೇ ಇದೆ. ಬಹಳ ದೊಡ್ಡ ಜೀವ ಅದು’ ಎಂದರು.

ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮಳೆ ಕೊಂಚ ಕಡಿಮೆಯಾಗಿದ್ದನ್ನು ಗಮನಿಸಿದ ರಜನಿಕಾಂತ್‌ ಮತ್ತೆ ಮಾತಿಗಿಳಿದರು. ಪುನೀತ್‌ ಅವರು 4 ವರ್ಷಗಳ ಪುಟ್ಟ ಮಗುವಾಗಿ ಪರಿಚಯವಾದದ್ದು, ಅವರ ಬೆಳವಣಿಗೆಯನ್ನು ಸ್ಮರಿಸಿದರು.

ರಾಜ್ ಅವರು ಪ್ರತಿವರ್ಷ ಶಬರಿಮಲೆಗೆ ಹೋಗುತ್ತಿದ್ದರು. 48 ಕಿ.ಮೀ ದೂರ ಅಪ್ಪುವನ್ನು ಹೆಗಲ ಮೇಲೆಯೇ ಕೂರಿಸಿಕೊಂಡು ನಡೆದೇ ಹೋಗುತ್ತಿದ್ದರು.

ಇರುಮುಡಿ ಕಟ್ಟಿದ ಬಳಿಕ ಶಬರಿಮಲೆಗೆ ಹೊರಡುವ ಮುನ್ನ ಯಾವಾಗಲೂ ಖ್ಯಾತಗಾಯಕ ವೀರಮಣಿ ಅವರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಜನೆ ಆರಂಭಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.