ADVERTISEMENT

ನಮ್ಮ ಪಕ್ಷದ ಮೂರನೇ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ: ಮುಖ್ಯಮಂತ್ರಿ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 6:32 IST
Last Updated 6 ಜೂನ್ 2022, 6:32 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: 'ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಮೂರನೇ ಅಭ್ಯರ್ಥಿ ಲಹರ್ ಸಿಂಗ್ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಇದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರ ಜೊತೆ ಸೋಮವಾರ ಮಾತನಾಡಿದ ಅವರು, 'ಪ್ರತಿಯೊಂದು ರಾಜ್ಯಸಭೆ ಚುನಾವಣೆ ಒಂದೊಂದು ರೀತಿ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಏಳೆಂಟು ಜನ ಬಹಿರಂಗವಾಗಿಯೇ ರೆಬಲ್ ಆಗಿದ್ದರು' ಎಂದರು.

'ಮೊದಲು ಗುಪ್ತ ಮತದಾನ ನಡೆದಾಗಲೂ ಹಲವಾರು ಬದಲಾವಣೆಗಳು ಆಗಿವೆ. ಇನ್ನು ಕೆಲವರು ಉದ್ಯಮಿಗಳ ಪರವಾಗಿ ಇದ್ದರು. ಈ ಬಾರಿ ಇನ್ನೊಂದು ರೀತಿ ಚುನಾವಣೆ ನಡೆಯಬಹುದು' ಎಂದರು.

ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ: ಅದಕ್ಕೂ ಮೊದಲು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, 'ಪಠ್ಯ ಪರಿಷ್ಕರಣೆ ಮೊದಲ ಬಾರಿ ಆಗುತ್ತಿಲ್ಲ. ಸಿದ್ದರಾಮಯ್ಯ ಅವರುಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ' ಎಂದರು.

'ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪರಿಷ್ಕರಣೆ ವೇಳೆ ಬದಲಾವಣೆಗಳಾಗಿವೆ. ಅವರ ಕಾಲದಲ್ಲಿಯೂ ಹೀಗೆ ಆಗಿದೆ. ಆಗೇನು ಅವರು ಪಠ್ಯ ಪುಸ್ತಕ ಪರಿಷ್ಕರಣೆ ಹಿಂದೆಗೆದುಕೊಂಡರೆ? ಸುಮ್ಮನೆ ಗೊಂದಲ ಸೃಷ್ಟಿ ಮಾಡಬಾರದು. ನಾವು ಈ ಬಗ್ಗೆ ಮುಕ್ತವಾಗಿದ್ದೇವೆ.ತಪ್ಪುಗಳನ್ನು ಸರಿಪಡಿಸಲು ಸಿದ್ಧರಿದ್ದೇವೆ. ಅದ್ಯಾವುದರ ಬಗ್ಗೆಯೇ ಆಗಲಿ ಸರಿಪಡಿಸಿ ಮರು ಮುದ್ರಣ ಮಾಡಲಾಗುವುದು' ಎಂದರು.

ಪೀರ್ ಪಾಷಾ ದರ್ಗಾ:
'ಪೀರ್ ಪಾಷಾ ದರ್ಗಾ ಕುರಿತು ಸಂಶೋಧನೆ ಮಾಡಲುವಂತೆ ಸ್ವಾಮೀಜಿಗಳು ಮನವಿ ನೀಡಿದ್ದಾರೆ. ಪುರಾತತ್ವ ಇಲಾಖೆ ಪರಿಶೀಲನೆ ನಡೆಸಲಿದೆ' ಎಂದೂ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.