ADVERTISEMENT

64 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 19:07 IST
Last Updated 28 ಅಕ್ಟೋಬರ್ 2019, 19:07 IST
   

ಚಿಕ್ಕಮಗಳೂರು: ನ್ಯಾಯಮೂರ್ತಿ ಎನ್‌.ಕುಮಾರ್‌, ವೈದ್ಯ ಡಾ.ಜಿ.ಟಿ. ಸುಭಾಷ್‌, ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ, ಡಾ.ಕೆ.ಚಿದಾನಂದಗೌಡ, ಸಂಶೋಧಕ ಪ್ರೊ.ಬಿ.ರಾಜಶೇಖರಪ್ಪ, ಲೆಫ್ಟಿನೆಂಟ್‌ ಜನರಲ್‌ ಬಿ.ಎಂ.ಪ್ರಸಾದ, ನಟಿ ಶೈಲಶ್ರೀ, ಕಲಾವಿದೆ ಭಾರ್ಗವಿ ನಾರಾಯಣ ಸೇರಿ 64 ಜನ ಸಾಧಕರನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

‘ಪ್ರಶಸ್ತಿಯು ₹1 ಲಕ್ಷ ನಗದು, 25 ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ. ಈ ಬಾರಿ ಚಿನ್ನದ ಪದಕದಲ್ಲಿ ಪುರಸ್ಕೃತ ಹೆಸರನ್ನು ಟಂಕಿಸಿ ಕೊಡಲಾಗುವುದು. ನವೆಂಬರ್‌ 1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ’ ಎಂದು ಸಚಿವ ರವಿ ತಿಳಿಸಿದರು.

ADVERTISEMENT

ಪ್ರಶಸ್ತಿಗೆ 1,512 ಅರ್ಜಿಗಳು ಸಲ್ಲಿಕೆಯಾಗಿದ್ದವು. ‘ಪಬ್ಲಿಕ್‌ ಹೀರೋ’ಗಳನ್ನು (ಎಲೆಮರೆಕಾಯಿಯಂತೆ ಇರುವವರು) ಹೆಸರಿಸುವಂತೆ ಕೇಳಿದ್ದೆವು. ಅದರಂತೆ ಜನರು 357 ಮಂದಿ ಹೆಸರು ಸೂಚಿಸಿದ್ದರು. ಒಟ್ಟಾರೆ 1,869 ಮಂದಿ ಪರಿಗಣನೆಯಲ್ಲಿ ಇದ್ದರು’ ಎಂದರು.

ನ್ಯಾ.ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿ ನಿಗದಿಪಡಿಸಿದ್ದ ಮಾನದಂಡ ಆಧರಿಸಿ ಆಯ್ಕೆ ಮಾಡಲಾಗಿದೆ. 29 ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಲಾಗಿದೆ. ಜಾನಪದ, ರಂಗಭೂಮಿ ಮತ್ತು ಸಂಕೀರ್ಣ ತಲಾ 6, ವೈದ್ಯಕೀಯ–5, ಸಾಹಿತ್ಯ, ಶಿಕ್ಷಣ ಹಾಗೂ ಸಂಗೀತ ತಲಾ 4, ಹೊರನಾಡು ಮತ್ತು ಕ್ರೀಡೆ ತಲಾ 3, ಪರಿಸರ, ಕೃಷಿ, ಯೋಗ, ಸಮಾಜಸೇವೆ, ಸಂಘಸಂಸ್ಥೆ, ಶಿಲ್ಪಕಲೆ ಮತ್ತು ಚಿತ್ರಕಲೆ ತಲಾ 2, ನ್ಯಾಯಾಂಗ, ಯಕ್ಷಗಾನ, ಬಯಲಾಟ, ಚಲನಚಿತ್ರ, ಕಿರುತೆರೆ, ಪತ್ರಿಕೋದ್ಯಮ, ಸಹಕಾರ, ಗುಡಿ ಕೈಗಾರಿಕೆ, ವಿಮರ್ಶೆ ಕ್ಷೇತ್ರದಿಂದ ತಲಾ ಒಬ್ಬರು ಇದ್ದಾರೆ. ಜನರೇ ಸೂಚಿಸಿದ (ಪಬ್ಲಿಕ್‌ ಹೀರೋ) 12 ಮಂದಿ ಇದ್ದಾರೆ, ಈ ಪೈಕಿ ಎರಡು ಸಂಘ ಸಂಸ್ಥೆಗಳಿವೆ. ಎಲ್ಲ ಜಿಲ್ಲೆಗಳನ್ನೂ ಪರಿಗಣಿಸಲಾಗಿದೆ. ಬೆಂಗಳೂರಿಗೆ ಹೆಚ್ಚು ಪ್ರಶಸ್ತಿಗಳು ಸಂದಿವೆ ಎಂದರು.

‘ಕೆಲವರು ಪ್ರಶಸ್ತಿಗೆ ಹೆಸರು ಪರಿಗಣಿಸುವಂತೆ ನನ್ನ ಪತ್ನಿ ಕಡೆಯಿಂದ, ಗುರುಗಳಿಂದ, ಸ್ನೇಹಿತರಿಂದ ಒತ್ತಡ ಹಾಕಿಸುವ ಪ್ರಯತ್ನ ಮಾಡಿದರು. ಶಿಫಾರಸು, ಮಮಕಾರಕ್ಕೆ ಮಣಿಯದೆ ಸಮಿತಿ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಂಡಿದ್ದೇವೆ’ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ–2019’ ಪುರಸ್ಕೃತರು


ಸಾಹಿತ್ಯ: ಡಾ.ಮಂಜಪ್ಪ ಶೆಟ್ಟಿ ಮಸಗಲಿ (ಚಿಕ್ಕಮಗಳೂರು), ಪ್ರೊ.ಬಿ.ರಾಜಶೇಖರಪ್ಪ (ಚಿತ್ರದುರ್ಗ), ಚಂದ್ರಕಾಂತ ಕರದಳ್ಳಿ (ಯಾದಗಿರಿ), ಡಾ.ಸರಸ್ವತಿ ಚಿಮ್ಮಲಗಿ (ವಿಜಯಪುರ)

ರಂಗಭೂಮಿ: ಪರಶುರಾಮ ಸಿದ್ಧಿ (ಉತ್ತರ ಕನ್ನಡ), ಪಾಲ್‌ ಸುದರ್ಶನ್‌ (ಕೊಪ್ಪಳ), ಹೊಲಿ ಶೇಖರ್‌ (ಬೆಳಗಾವಿ), ಎನ್‌.ಶಿವಲಿಂಗಯ್ಯ(ರಾಮನಗರ), ಡಾ.ಎಚ್‌.ಕೆ.ರಾಮನಾಥ (ಹಾಸನ), ಭಾರ್ಗವಿ ನಾರಾಯಣ (ಬೆಂಗಳೂರು ನಗರ)

ಸಂಗೀತ: ಛೋಟೆ ರೆಹಮತ್‌ ಖಾನ್‌ (ಧಾರವಾಡ), ನಾಗವಲ್ಲಿ ನಾಗರಾಜ್‌ (ಬೆಂಗಳೂರು ನಗರ), ಡಾ.ಮುದ್ದು ಮೋಹನ (ರಾಯಚೂರು), ಶ್ರೀನಿವಾಸ ಉಡುಪ (ಶಿವಮೊಗ್ಗ)

ಜಾನಪದ: ನೀಲಗಾರರು ದೊಡ್ಡಗವಿಬಸಪ್ಪ –ಮಂಟೆಸ್ವಾಮಿ ಪರಂಪರೆ(ಚಾಮರಾಜನಗರ), ಹೊಳಬಸಯ್ಯ ದುಂಡಯ್ಯ ಸಂಬಳದ (ಬಾಗಲಕೋಟೆ), ಭೀಮಸಿಂಗ್‌ ಸಕಾರಾಮ್‌ ರಾಥೋಡ್‌ (ಬೀದರ್‌), ಉಸ್ಮಾನ್‌ ಸಾಬ್‌ ಖಾದರ್‌ ಸಾಬ್‌ (ರಾಯಚೂರು), ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ (ಹಾವೇರಿ), ಕೆ.ಆರ್‌.ಹೊಸಳಯ್ಯ (ತುಮಕೂರು)

ಶಿಲ್ಪಕಲೆ: ವಿ.ಎ.ದೇಶಪಾಂಡೆ (ಮೈಸೂರು), ಜ್ಞಾನೇಶ್ವರ (ಶಿವಮೊಗ್ಗ)
ಚಿತ್ರಕಲೆ: ಯು.ರಮೇಶರಾವ್‌ (ಉಡುಪಿ), ಮೋಹನ ಸಿತನೂರು (ಕಲಬುರ್ಗಿ)
ಕ್ರೀಡೆ: ವಿಶ್ವನಾಥ್‌ ಭಾಸ್ಕರ್‌ ಗಾಣಿಗ (ಉಡುಪಿ), ಚೇನಂಡ ಎ. ಕುಟ್ನಪ್ಪ (ಕೊಡಗು), ನಂದಿತಾ ನಾಗನಗೌಡರ್‌ (ಧಾರವಾಡ)
ಯೋಗ: ವನಿತಕ್ಕ (ಬೆಂಗಳೂರು ನಗರ), ಕುಮಾರಿ ಖುಷಿ (ಮೈಸೂರು)
ಯಕ್ಷಗಾನ: ಶ್ರೀಧರ ಭಂಡಾರಿ ಪುತ್ತೂರು (ದಕ್ಷಿಣ ಕನ್ನಡ)
ಬಯಲಾಟ: ವೈ.ಮಲ್ಲಪ್ಪ ಗವಾಯಿ (ಬಳ್ಳಾರಿ)
ಚಲನಚಿತ್ರ: ಶೈಲಶ್ರೀ (ಬೆಂಗಳೂರು ನಗರ)
ಕಿರುತೆರೆ: ಜಯಕುಮಾರ ಕೊಡಗನೂರು (ದಾವಣಗೆರೆ)
ಶಿಕ್ಷಣ: ಎಸ್‌.ಆರ್‌.ಗುಂಜಾಳ್‌ (ಧಾರವಾಡ), ಪ್ರೊ.ಟಿ.ಶಿವಣ್ಣ (ಮಂಡ್ಯ), ಡಾ.ಕೆ.ಚಿದಾನಂದಗೌಡ (ಮೈಸೂರು), ಡಾ.ಗುರುರಾಜ ಕರಜಗಿ (ಹಾವೇರಿ)
ಸಂಕೀರ್ಣ: ಎಸ್‌.ಟಿ. ಶಾಂತಗಂಗಾಧರ್‌ (ದಾವಣಗೆರೆ), ಡಾ.ಚನ್ನವೀರ ಶಿವಾಚಾರ್ಯ (ಬೀದರ್‌), ಲೆಫ್ಟಿನೆಂಟ್‌ ಜನರಲ್‌ ಬಿ.ಎನ್‌.ಬಿ.ಎಂ.ಪ್ರಸಾದ್‌ (ಬೆಂಗಳೂರು ನಗರ) , ಡಾ.ನಾ.ಸೋಮೇಶ್ವರ (ಬೆಂಗಳೂರು ನಗರ), ಕೆ.ಪ್ರಕಾಶ್ ಶೆಟ್ಟಿ (ಉಡುಪಿ), ಡಾ.ವಿಜಯ ಸಂಕೇಶ್ವರ (ಗದಗ)

ಪತ್ರಿಕೋದ್ಯಮ: ಬಿ.ವಿ.ಮಲ್ಲಿಕಾರ್ಜುನಯ್ಯ (ಬೆಂಗಳೂರು ನಗರ)

ಸಹಕಾರ: ರಮೇಶ ವೈದ್ಯ (ಕೊಪ್ಪಳ)

ಸಮಾಜಸೇವೆ: ಎಸ್‌.ಜಿ.ಭಾರತಿ (ಕಲಬುರ್ಗಿ, ಕತ್ತಿಗೆ ಚೆನ್ನಪ್ಪ (ಶಿವಮೊಗ್ಗ)

ಕೃಷಿ: ಬಿ.ಕೆ.ದೇವರಾವ್‌ (ದಕ್ಷಿಣ ಕನ್ನಡ), ವಿಶ್ವೇಶ್ವರ ಸಜ್ಜನ್‌ (ಬಳ್ಳಾರಿ)

ಪರಿಸರ: ಸಾಲುಮರದ ವೀರಾಚಾರ್‌ (ದಾವಣಗೆರೆ), ಶಿವಾಜಿ ಛತ್ರಪ್ಪ ಕಾಗಣಿಕರ್‌ (ಬೆಳಗಾವಿ)

ಸಂಘ–ಸಂಸ್ಥೆ: ಪ್ರಭಾತ್‌ ಆರ್ಟ್‌ ಇಂಟರ್‌ನ್ಯಾಷನಲ್‌ (ಬೆಂಗಳೂರು ನಗರ), ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ (ತುಮಕೂರು– ಹನುಮಂತಪುರ)

ವೈದ್ಯಕೀಯ: ಡಾ.ಹನುಮಂತರಾಯ ಪಂಡಿತ್‌ (ತುಮಕೂರು), ಡಾ.ಆಂಜನಪ್ಪ (ಬೆಂಗಳೂರು ಗ್ರಾಮಾಂತರ), ಡಾ.ನಾಗರತ್ನಾ (ಬೆಂಗಳೂರು ನಗರ), ಡಾ.ಜಿ.ಟಿ.ಸುಭಾಷ್‌ (ಹಾಸನ), ಡಾ.ಕೃಷ್ಣಪ್ರಸಾದ (ಉಡುಪಿ)

ನ್ಯಾಯಾಂಗ: ನ್ಯಾಯಮೂರ್ತಿ ಎನ್‌.ಕುಮಾರ್‌ (ಚಿಕ್ಕಬಳ್ಳಾಪುರ)

ಹೊರನಾಡು: ಜಯವಂತ ಮನ್ನೊಳಿ (ಬೆಂಗಳೂರು ನಗರ), ಗಂಗಾಧರ ಬೇವಿನಕೊಪ್ಪ (ಬೆಂಗಳೂರು ನಗರ), ಬಿ.ಜಿ.ಮೋಹನದಾಸ್‌ (ಉಡುಪಿ)

ಗುಡಿಕೈಗಾರಿಕೆ: ನವರತ್ನ ಇಂದುಕುಮಾರ (ಚಿಕ್ಕಮಗಳೂರು)

ವಿಮರ್ಶೆ: ಕೆ.ವಿ.ಸುಬ್ರಹ್ಮಣ್ಯಂ (ಬೆಂಗಳೂರು ನಗರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.