ರಾಮನಗರ ಜಿಲ್ಲೆಯ ನಕ್ಷೆ
ಬೆಂಗಳೂರು: ‘ರಾಮನಗರ ಜಿಲ್ಲೆ’ಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡಿ ಕಂದಾಯ ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಮರುನಾಮಕರಣ ಮಾಡಲು ಸಮ್ಮತಿ ನೀಡಿತ್ತು. ಅದರಂತೆ ರಾಜ್ಯಪತ್ರ ಹೊರಡಿಸಲಾಗಿದೆ.
ಕನ್ನಡದಲ್ಲಿ ‘ಬೆಂಗಳೂರು ದಕ್ಷಿಣ ಜಿಲ್ಲೆ’, ರೋಮನ್ ಲಿಪಿಯಂತೆ ‘Bengaluru South District' ಹಾಗೂ ದೇವನಾಗರಿ ಲಿಪಿಯಲ್ಲೂ ಕನ್ನಡದ ಉಚ್ಚಾರಣೆಯಂತೆಯೇ ಹೆಸರಿಸುವುದು ಎಂದು ಅಧಿಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.