ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್‌ನ ನೂತನ ಅಧ್ಯಕ್ಷರಾಗಿ ಉದ್ಯಮಿ ಎಂ.ಪಿ. ಕುಮಾರ್ ಆಯ್ಕೆಯಾಗಿದ್ದಾರೆ.
ಪರಿಷತ್ತಿನ ಆಡಳಿತ ಮಂಡಳಿಯ ಸಭೆಯು ಭಾನುವಾರ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ್ ಹಾಗೂ ಪರಿಷತ್ತಿನ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು: ಎ.ಆರ್. ದ್ವಾರಕಾನಾಥ್ (ಉಪಾಧ್ಯಕ್ಷ), ನಾ.ದಿನೇಶ್ ಹೆಗ್ಡೆ (ಪ್ರಧಾನ ಕಾರ್ಯದರ್ಶಿ), ಗಣಪತಿ ಹೆಗಡೆ (ಖಜಾಂಚಿ), ಸದಸ್ಯರು: ಅಶೋಕ್ ಸೋನಕರ್, ಕೆ.ಎಸ್. ನಾರಾಯಣ, ಬಿ.ಎಸ್. ರವಿಕುಮಾರ್, ಮಾಲಿನಿ ಭಾಸ್ಕರ್, ಗಜಾನನ ಲೋಂಢೆ, ಎಸ್.ಆರ್. ರಾಮಸ್ವಾಮಿ, ಎ. ಗೋಪಾಲಕೃಷ್ಣ ನಾಯಕ್, ರಾಜಾರಾಮ್, ಬಸವನಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.