ADVERTISEMENT

ಒಳನೋಟ| ತಬ್ಬಲಿಯು ನೀನಾದೆ ಮಗನೆ... ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 11:24 IST
Last Updated 9 ಅಕ್ಟೋಬರ್ 2022, 11:24 IST
   

ಬೆಂಗಳೂರು: ‘ತಬ್ಬಲಿಯು ನೀನಾದೆ ಮಗನೆ...’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಅ.9) ‍ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ‍್ರತಿಕ್ರಿಯೆಗಳು ಇಲ್ಲಿವೆ.

‘ಜಾನುವಾರುಗಳ ಆರೋಗ್ಯಕ್ಕೆ ಆದ್ಯತೆ ನೀಡಿ’

ಜಾನುವಾರುಗಳಲ್ಲಿಲಿಂಪಿ ವೈರಸ್ (ಲಿಂಪಿ ಚರ್ಮರೋಗ) ಕಾಣಿಸಿಕೊಳ್ಳುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ಈ ರೋಗ ಹಲವು ದನಕರುಗಳಿಗೆ ಹರಡಿದೆ. ಈ ರೋಗಕ್ಕೆ ನಿಖರ ಚಿಕಿತ್ಸೆ ಹಾಗೂ ಔಷಧವನ್ನು ಆವಿಷ್ಕಾರ ಮಾಡಿಲ್ಲ. ಇದರಿಂದಾಗಿ ಕಣ್ಣೆದುರೆ ಜಾನುವಾರುಗಳು ಸಾವಿಗೀಡಾಗುತ್ತಿವೆ.ಹಸುಗಳ ಚರ್ಮದ ಮೇಲೆ ದೊಡ್ಡ ದೊಡ್ಡ ರಂಧ್ರಗಳಾಗುತ್ತಿವೆ. ಗರ್ಭಧರಿಸಿದ ಹಸುಗಳಿಗೆ ಲಿಂಪಿ ವೈರಸ್ ತಗುಲಿದರೆ ಗರ್ಭಪಾತ ಆಗುತ್ತದೆ. ಆದ್ದರಿಂದ ಜಾನುವಾರುಗಳ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಿ, ಸಾವನ್ನು ತಡೆಯಲು ಕ್ರಮವಹಿಸಬೇಕು.

ADVERTISEMENT

।ಸಂಗೀತಾ ಜಿ.ಎಲ್., ಬೆಳಗಾವಿ

‘ಹೈನುಗಾರಿಕೆಗೆ ದೊಡ್ಡ ಪೆಟ್ಟು’

ಈ ಹಿಂದೆ ಊರುಗಳಲ್ಲಿ ಜಾನುವಾರುಗಳನ್ನು ಮೇಯಿಸಲುಗೋಮಾಳ ಜಾಗ ಇರುತ್ತಿತ್ತು. ಈಗ ಹಸುಗಳನ್ನು ಮೇಯಿಸಲು ಜಾಗಗಳು ಸಿಗುತ್ತಿಲ್ಲ. ಇದರಿಂದಾಗಿ ಜಾನುವಾರುಗಳು ಮೇವನ್ನು ಅರಸುತ್ತಾ ರಸ್ತೆಗಳಿಗೆ ಬಂದು, ವಾಹನಗಳ ಚಕ್ರಗಳಿಗೆ ಸಿಕ್ಕಿ ಸಾಯುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿಹೈನುಗಾರಿಕೆಗೆ ದೊಡ್ಡ ಪೆಟ್ಟು ಬೀಳುವುದು ಖಂಡಿತ.

।ಎಂ. ಪರಮೇಶ್ವರ, ಚಿತ್ರದುರ್ಗ

‘ಗೋಶಾಲೆಗಳನ್ನು ಶೀಘ್ರ ಸ್ಥಾಪಿಸಿ’

ಯಾವುದೇ ಕಾಯ್ದೆಯನ್ನು ಜಾರಿ ಮಾಡುವ ಮೊದಲು ಅದರ ಅಡ್ಡ ಪರಿಣಾಮಗಳ ಬಗ್ಗೆಯೂ ಚರ್ಚಿಸಬೇಕು. ಆಡಳಿತ ಪಕ್ಷದ ಜತೆಗೆ ವಿರೋಧ ಪಕ್ಷದವರ ಅಭಿಪ್ರಾಯವನ್ನೂ ಪರಿಗಣಿಸಬೇಕು.ಈಗ ಜಾರಿಯಾಗಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು, ಮೂಕಪ್ರಾಣಿಗಳ ಜೀವ ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಗೋಶಾಲೆಗಳನ್ನು ಶೀಘ್ರವೇ ಸ್ಥಾಪಿಸಲು ಕ್ರಮವಹಿಸಬೇಕು.

।ನಾಗವೇಣಿ, ಹೆಬ್ಬಾಳ ನಿವಾಸಿ

‘ಗೋವು ರಕ್ಷಣೆಗೆ ಕ್ರಮವಹಿಸಿ’

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಾಗ ಕೆಲವು ರಾಜಕಾರಣಿಗಳು ಗೋಶಾಲೆ ತೆಗೆಯುತ್ತೆವೆ ಎಂಬ ಭರವಸೆ ನೀಡಿದ್ದರು. ಆದರೆ, ಈಗ ಸರ್ಕಾರಿ ಬಂಗಲೆಯಲ್ಲಿ ಮಜಾ ಮಾಡುತ್ತಿದ್ದಾರೆ. ಜಾನುವಾರುಗಳು ಬೀದಿಯಲ್ಲಿ ಯಾರಿಗೂ ಬೇಡವಾಗಿ, ರಸ್ತೆ ಅಪಘಾತದಲ್ಲಿ ಹಾಗೂ ಆಹಾರವಿಲ್ಲದೆ ಸಾಯುತ್ತಿವೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮೊದಲು ಈ ಜಾನುವಾರುಗಳಿಂದ ರೈತರಿಗೆ ಆದಾಯು ಬರುತ್ತಿತ್ತು. ಎಲ್ಲರಿಗೂ ಕಲ್ಪವೃಕ್ಷ ಆಗಿದ್ದ ಗೋವುಗಳು ಈಗ ಬೀದಿಯಲ್ಲಿ ಅನಾಥ ಶವವಾಗಿ ಕೊಳೆಯುತ್ತಿವೆ. ಗೋವುಗಳ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮವಹಿಸಬೇಕು.

।ಜಿ. ಕುಮಾರ, ಬೆಂಗಳೂರು

‘ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪಿಸಿ’

ಭಾರತ ಹಲವು ಧರ್ಮ, ಸಂಸ್ಕೃತಿಗಳ ರಾಷ್ಟ್ರ. ಬಹುತ್ವವೇ ಭಾರತದ ಜೀವಾಳ. ಗೋ ಮಾತೆಯು ಪೂಜನೀಯ ಪ್ರಾಣಿ. ಆಧುನಿಕ ತಂತ್ರಜ್ಞಾನದಿಂದಾಗಿ ರೈತರು ಎತ್ತುಗಳನ್ನು ಸಾಕುವ ಗೋಜಿಗೆ ಹೋಗುತ್ತಿಲ್ಲ. ಆದ್ದರಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಗೋ ಶಾಲೆಯನ್ನು ತೆರೆದು, ತಬ್ಬಲಿಯಾದ ಎತ್ತುಗಳಿಗೆ ಸರ್ಕಾರ ನೆರವಾಗಬೇಕು.

।ನೇತ್ರಾವತಿ ಕೆ.ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.