ADVERTISEMENT

ವಾಹನ ಬಾಡಿಗೆ ಶಾಸಕರ ವೇತನದಲ್ಲೇ ಕಡಿತ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 16:16 IST
Last Updated 31 ಜುಲೈ 2024, 16:16 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಶಾಸಕರು ಮತ್ತು ಮಾಜಿ ಶಾಸಕರ ಬಳಕೆಗೆ ಬಾಡಿಗೆ ಆಧಾರದಲ್ಲಿ ಒದಗಿಸಲಾಗುವ ಶಾಸಕರ ಭವನದ ವಾಹನಗಳ ಬಾಡಿಗೆಯನ್ನು, ಶಾಸಕರ ವೇತನದಲ್ಲೇ ಕಡಿತ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ.

ಈವರೆಗೆ ಇದ್ದ ವ್ಯವಸ್ಥೆಯಲ್ಲಿ ವಾಹನ ಬಳಕೆಯ ನಂತರ ನಗದು ರೂಪದಲ್ಲಿ ಬಾಡಿಗೆ ಪಾವತಿ ಮಾಡಲಾಗುತ್ತಿತ್ತು. ನೂತನ ವ್ಯವಸ್ಥೆಯು ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ವಿಧಾನಸಭೆ ಸಚಿವಾಲಯ ತಿಳಿಸಿದೆ.

ADVERTISEMENT

ನೂತನ ವ್ಯವಸ್ಥೆ ಅಡಿ ವಾಹನದ ಬಳಕೆಯ ನಂತರ ಶಾಸಕರು ಮತ್ತು ಮಾಜಿ ಶಾಸಕರು ಟ್ರಿಪ್‌ ಶೀಟ್‌ನಲ್ಲಿ ಸಹಿ ಮಾಡಬೇಕು. ಅದರ ಆಧಾರದಲ್ಲಿ ಬಾಡಿಗೆ ಮೊತ್ತ, ನಿರೀಕ್ಷಣಾ ಶುಲ್ಕ ಮತ್ತು ಶೇ 18ರಷ್ಟು ಜಿಎಸ್‌ಟಿ ಒಳಗೊಂಡ ಬಿಲ್‌ ಅನ್ನು ಸಿದ್ಧಪಡಿಸಲಾಗುತ್ತದೆ. ಶಾಸಕರ ವೇತನ ಮತ್ತು ಮಾಜಿ ಶಾಸಕರ ನಿವೃತ್ತಿ ವೇತನದಲ್ಲಿ ಹಾಗೂ ರೈಲ್ವೆ ಭತ್ಯೆಯಲ್ಲಿ ಬಿಲ್‌ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.