ADVERTISEMENT

ಹಾಲಿನ ಪ್ರೋತ್ಸಾಹಧನ ಬಿಡುಗಡೆ

ಪಶುಸಂಗೋಪನೆ ಇಲಾಖೆಯ 100 ದಿನಗಳ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:41 IST
Last Updated 18 ಡಿಸೆಂಬರ್ 2019, 19:41 IST
   

ಬೆಂಗಳೂರು:ರಾಜ್ಯದ 8.45 ಲಕ್ಷ ಹಾಲು ಉತ್ಪಾದಕರಿಗೆ ₹ 246.24 ಕೋಟಿ ಪ್ರೋತ್ಸಾಹಧನವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.

ನಗರದಲ್ಲಿ ಬುಧವಾರ ಇಲಾಖೆಯ 100 ದಿನಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು,ವಿಶೇಷ ಘಟಕ ಯೋಜನೆಯಡಿ ₹ 162.50 ಕೋಟಿ ಅನುದಾನ ನಿಗದಿಯಾಗಿದ್ದು, ₹ 76.98 ಕೋಟಿ ಬಿಡುಗಡೆಯಾಗಿದೆ. ₹ 16.65 ಕೋಟಿ ವೆಚ್ಚವಾಗಿದೆ. ಗಿರಿಜನ ಉಪಯೋಜನೆಯಡಿ ₹ 91.95 ಕೋಟಿ ಅನುದಾನ ನಿಗದಿಯಾಗಿದ್ದು, ₹ 44.17ಕೋಟಿ ಬಿಡುಗಡೆಯಾಗಿದೆ, ₹ 8.05ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದರು.

‘ವಲಸೆ ಕುರಿಗಾರರಿಗೆ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ನೀಡುವ ಕಾರ್ಯಕ್ರಮದಡಿ 1,675 ಬಡ ಸಂಚಾರಿ/ಅರೆ ಸಂಚಾರಿ ಕುರಿಗಾರರಿಗೆ ₹ 2.88 ಕೋಟಿ ವೆಚ್ಚದಲ್ಲಿ ಉಚಿತವಾಗಿ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರೈನ್ ಕೋಟ್ ಮತ್ತು ರಬ್ಬರ್ ಫ್ಲೋರ್ ಮ್ಯಾಟ್‌ಗಳನ್ನು ಹೊಂದಿರುವ ಪರಿಕರ ಕಿಟ್ಟುಗಳನ್ನು ವಿತರಿಸಲಾಗಿದೆ ಎಂದರು.

ADVERTISEMENT

1 ಕೋಟಿ ಜಾನುವಾರುಗಳಿಗೆ ಲಸಿಕೆ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣಮತ್ತು ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆಗಳ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದ್ದು, ಜಾನುವಾರುಗಳಿಗೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಮಾರಕ ಕಾಲುಬಾಯಿ ರೋಗದ ವಿರುದ್ಧ 16ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಇದುವರೆಗೆ 29,803 ಹಳ್ಳಿಗಳಲ್ಲಿ 103.51 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇದೊಂದು ಯಶಸ್ವಿ ಲಸಿಕಾ ಅಭಿಯಾನ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.