ADVERTISEMENT

ಯುಗಮಾನೋತ್ಸವ, ರಥೋತ್ಸವ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 20:26 IST
Last Updated 7 ಮಾರ್ಚ್ 2023, 20:26 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಬುಧವಾರ ಭದ್ರಾ ನದಿ ತೀರದಲ್ಲಿ ಪೀಠದ ಸ್ವಾಮೀಜಿಗೆ ಸುರಗಿ ಸಮಾರಾಧನೆ- ಇಷ್ಟಲಿಂಗ ಮಹಾಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಬುಧವಾರ ಭದ್ರಾ ನದಿ ತೀರದಲ್ಲಿ ಪೀಠದ ಸ್ವಾಮೀಜಿಗೆ ಸುರಗಿ ಸಮಾರಾಧನೆ- ಇಷ್ಟಲಿಂಗ ಮಹಾಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು   

ರಂಭಾಪುರಿ ಪೀಠ(ಬಾಳೆಹೊನ್ನೂರು): ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವಕ್ಕೆ ಮಂಗಳವಾರ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ-ಇಷ್ಟಲಿಂಗ ಮಹಾಪೂಜೆ ನೆರವೇರಿಸುವ ಮೂಲಕ ತೆರೆ ಎಳೆಯಲಾಯಿತು.

ಪೀಠದ ಮುಂಭಾಗದಲ್ಲಿ ವಸಂತೋತ್ಸವ, ಭದ್ರಾ ನದಿ ದಡದಲ್ಲಿ ಸುರಗಿ ಸಮಾರಾಧನೆ, ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ‘ಭೌತಿಕ ಸಂಪತ್ತು ಬರಬಹುದು, ಹೋಗಬಹುದು. ಆದರೆ, ಸ್ನೇಹ, ಸಂತೃಪ್ತಿ, ಸಂತೋಷವೇ ಜೀವನದ ನಿಜವಾದ ಸಂಪತ್ತು’ ಎಂದರು.

ಹುಟ್ಟು– ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ಕಟ್ಟಿಕೊಳ್ಳುವ ಶಕ್ತಿಯಿದೆ. ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ಹೊರತು ಬರೀ ಬಯಕೆಗಳಿಂದಲ್ಲ. ಬೆಳೆಯ ಸುರಕ್ಷತೆಗೆ ಬೇಲಿ ಇರುವಂತೆ ಆತ್ಮೋನ್ನತಿಗಾಗಿ ಧರ್ಮಾಚರಣೆ ಅವಶ್ಯಕತೆಯಿದೆ. ಧರ್ಮ ಯಶಸ್ಸು, ನೀತಿ ದಕ್ಷತೆ ಮತ್ತು ಒಳ್ಳೆಯ ಮಾತು ಯಾರಲ್ಲಿರುವುದೋ ಅವರು ಎಂದೆಂದಿಗೂ ದುಃಖಿತರಾಗುವುದಿಲ್ಲ. ಕಾಲ ಕಾಲಕ್ಕೆ ಮರದ ಎಲೆಗಳು ಉದುರಿದರೂ ಮರದ ಬೇರು ಭದ್ರವಾಗಿರುವಂತೆ ಮನುಷ್ಯನ ಅಭಿಪ್ರಾಯಗಳು ಬದಲಾದರೂ ತತ್ವ ಸಿದ್ಧಾಂತಗಳು ಬದಲಾಗಬಾರದು. ಮನುಷ್ಯ-ಧರ್ಮಗಳ ಮಧ್ಯೆ ಸೇತುವೆ ನಿರ್ಮಿಸಬೇಕೇ ವಿನಾ ಗೋಡೆಗಳನ್ನಲ್ಲ ಎಂದರು.

ADVERTISEMENT

ಭದ್ರಾ ನದಿ ತಟದಲ್ಲಿ ಸಾವಿರಾರು ಭಕ್ತರು, ಅನೇಕ ಮಠಾಧೀಶರು ಏಕಕಾಲದಲ್ಲಿ ಅನ್ನ ಪ್ರಸಾದ ಪಡೆದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.