ADVERTISEMENT

ಮೀಸಲಾತಿಗೂ, ಜಾತಿವಾರು ಸಮೀಕ್ಷೆಗೂ ಸಂಬಂಧ ಇಲ್ಲ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 16:00 IST
Last Updated 30 ಆಗಸ್ಟ್ 2025, 16:00 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ‘ಮೀಸಲಾತಿಗೂ, ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೂ ಸಂಬಂಧವಿಲ್ಲ. ಹೀಗಾಗಿ ವೀರಶೈವ ಲಿಂಗಾಯತರು ಸಮೀಕ್ಷೆ ವೇಳೆ ನೈಜ ಮಾಹಿತಿಯನ್ನೇ ನೀಡಬೇಕು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ, ಸಮುದಾಯದ ಸಚಿವರು ಮತ್ತು ಶಾಸಕರ ಸಭೆಯನ್ನು ಹಿಂದಿನ ಶುಕ್ರವಾರ ನಡೆಸಲಾಗಿತ್ತು. ವೀರಶೈವ ಲಿಂಗಾಯತರು ಸಮೀಕ್ಷೆಯಲ್ಲಿ ನೈಜ ಮಾಹಿತಿಯನ್ನೇ ನೀಡುವಂತೆ ಕರೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು’ ಎಂದು ಹೇಳಿದರು.

‘ಕೆಲವರು ಮೀಸಲಾತಿ ದೊರಕಬಹುದು ಎಂದು ತಮ್ಮ ಉಪಜಾತಿಗೆ ಸಮೀಪದ ಮತ್ತೊಂದು ಜಾತಿಯ ಹೆಸರು ಬರೆಸಲಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಯಿತು. ಈ ಸಮೀಕ್ಷೆಯ ವರದಿ ಗೌಪ್ಯವಾಗಿ ಇರಲಿದ್ದು, ಇಲ್ಲಿ ತಪ್ಪು ಮಾಹಿತಿ ಕೊಟ್ಟ ತಕ್ಷಣ ಅದೇ ಜಾತಿಯ ಜಾತಿ ಪ್ರಮಾಣ ಪತ್ರ ಲಭಿಸುವುದಿಲ್ಲ’ ಎಂದರು.

ADVERTISEMENT

ಮಹಾಸಭಾದ ಪದಾಧಿಕಾರಿಗಳ ಸಭೆ:

‘ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ಸಭೆಯು ಶನಿವಾರ ನಡೆದಿದ್ದು, ಸಮೀಕ್ಷೆಯ ಕೈಪಿಡಿ ಬಿಡುಗಡೆಯಾದ ನಂತರ ಅದನ್ನು ಪರಿಶೀಲಿಸಿ, ಮುಂದಿನ ನಡೆ ನಿರ್ಧರಿಸುವ ಬಗ್ಗೆ ಚರ್ಚಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.