ADVERTISEMENT

ವಾಟ್ಸ್ ಆ್ಯಪ್: ಸಿಲಿಂಡರ್ ಕಾಯ್ದಿರಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:19 IST
Last Updated 16 ಸೆಪ್ಟೆಂಬರ್ 2021, 20:19 IST
   

ಬೆಂಗಳೂರು:ವಾಟ್ಸ್ ಆ್ಯಪ್ ಸಂದೇಶಗಳ ಮೂಲಕಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮರುಪೂರಣ ಹಾಗೂ ಕಾಯ್ದಿರಿಸುವ ಅವಕಾಶವನ್ನುಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ನೀಡಿದೆ.

‘ಹಲೋ’ ಸಂದೇಶವನ್ನು 1800224344 ಸಂಖ್ಯೆಗೆ ಕಳಿಸಿ,ಈ ಸೇವೆಯನ್ನು ಪಡೆಯಬಹುದು. ಹೆಚ್ಚುವರಿ ಸಿಲಿಂಡರ್, ಹೊಸ ಸಂಪರ್ಕ, ವಿಳಾಸ ಬದಲಾವಣೆ,ವಿತರಕರ ಕುರಿತ ಮಾಹಿತಿ ಮತ್ತು ಸಿಲಿಂಡರ್ ದರಗಳ ಮಾಹಿತಿಯನ್ನೂ
ವಾಟ್ಸ್ ಆ್ಯಪ್ ಸಂದೇಶದ ಮೂಲಕ ಪಡೆಯಬಹುದು ಎಂದು ಸಂಸ್ಥೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT