ADVERTISEMENT

ರಸ್ತೆ ವಿಸ್ತರಣೆಗೆ 1,139 ಮರಗಳ ಮಾರಣಹೋಮ

ಕಪ್ಪತ್ತಗುಡ್ಡ ಸಂರಕ್ಷಿತ ಪ್ರದೇಶದ ಅಂಚು: ಗದಗ–ಹೊನ್ನಳ್ಳಿ ರಸ್ತೆ ಅಭಿವೃದ್ಧಿ ಯೋಜನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:43 IST
Last Updated 14 ಅಕ್ಟೋಬರ್ 2020, 18:43 IST
ಗದಗ- ಹೊನ್ನಳ್ಳಿ ರಸ್ತೆ ವಿಸ್ತರಣೆಗಾಗಿ ಶಿರಹಟ್ಟಿ ಬೆಳ್ಳಟ್ಟಿ ರಸ್ತೆಯ ಪಕ್ಕದಲ್ಲಿರುವ ಆಲದ ಮರಗಳನ್ನು ಕಡಿಯಲಾಗಿದೆ
ಗದಗ- ಹೊನ್ನಳ್ಳಿ ರಸ್ತೆ ವಿಸ್ತರಣೆಗಾಗಿ ಶಿರಹಟ್ಟಿ ಬೆಳ್ಳಟ್ಟಿ ರಸ್ತೆಯ ಪಕ್ಕದಲ್ಲಿರುವ ಆಲದ ಮರಗಳನ್ನು ಕಡಿಯಲಾಗಿದೆ   

ಶಿರಹಟ್ಟಿ (ಗದಗ ಜಿಲ್ಲೆ): ಉತ್ತರ ಕರ್ನಾಟಕದ ಸಹ್ಯಾದ್ರಿ, ಸಸ್ಯಕಾಶಿ ಕಪ್ಪತ್ತಗುಡ್ಡ ಸಂರಕ್ಷಿತ ವನ್ಯಜೀವಿ ಧಾಮದ ಸೆರಗಿನ ಅಂಚಿನಲ್ಲಿ ಹಾದು ಹೋಗುತ್ತಿ
ರುವ ಗದಗ–ಹೊನ್ನಳ್ಳಿ ರಸ್ತೆ ವಿಸ್ತರಣೆ ಯೋಜನೆಗಾಗಿ 1,139 ಮರಗಳಿಗೆ ಈಗಾಗಲೇ ಕೊಡಲಿ ಏಟು ಬಿದ್ದಿದ್ದು, ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ-ಹೊನ್ನಳ್ಳಿ ಲೋಕೋಪಯೋಗಿ ಇಲಾಖೆಯ ಅಂಗ ಸಂಸ್ಥೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ (ಕೆ-ಶಿಪ್) ಕಾಮಗಾರಿ ಪ್ರಾರಂಭಿ
ಸಿದೆ. ಗದಗ ಅರಣ್ಯ ವಲಯದ ಭಾಗದಲ್ಲಿ 327 ಹಾಗೂ ಶಿರಹಟ್ಟಿ ಅರಣ್ಯ ವಲಯ ಭಾಗದಲ್ಲಿ 812 ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಕಪ್ಪತ್ತಗುಡ್ಡದ ಸೆರಗಾದ ಶಿರಹಟ್ಟಿ– ಬೆಳ್ಳಟ್ಟಿ ಮಾರ್ಗದಲ್ಲಿದ್ದ ಆಲ, ಬನ್ನಿ, ಹೆಬ್ಬೇವು, ತಪ್ಪಸ್ಸಿ, ರೈನ್‌ ಟ್ರೀ, ಹುಣಸೆ, ಹೊಂಗೆ, ಅರಳಿ ಸೇರಿದಂತೆ ನೂರಾರು ಜಾತಿಯ ಮರಗಳನ್ನು ಕಡಿಯಲಾಗಿದೆ. ‘ರಸ್ತೆ ವಿಸ್ತರಣೆಗೆ ಮರಗಳನ್ನು ಕಡಿಯಲು ಸರ್ಕಾರವೇ ಆದೇಶ ನೀಡಿದೆ. ’ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ಫಯಾಜ್‌ ಖಾಜಿ‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT